ಲಕ್ಷ್ಮೇಶ್ವರ: ತಾಲೂಕಿನ ಶಿಗ್ಲಿ ಗ್ರಾಮದಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಲಕ್ಷ್ಮೇಶ್ವರ ತಾಲೂಕು ಬ್ಲಾಕ್ ಕಾಂಗ್ರೆಸ್ ಕಮಿಟಿಯ ವತಿಯಿಂದ ಜಿಲ್ಲೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಜಿಲ್ಲೆಯ ಜನರ ಪ್ರತಿಕ್ರಿಯೆ, ಚಳವಳಿ ಕಾವು, ಸೆರೆವಾಸ, ಅಂದಿನ ಪರಿಸ್ಥಿತಿ ಕುರಿತು ಹೋರಾಟಗಾರರು ತಮ್ಮ ಅನುಭವವನ್ನು ಮೆಲುಕು ಹಾಕಿದರು. ಸ್ವಾತಂತ್ರ್ಯ ಸಂಗ್ರಾಮದ ಹೋರಾಟ ನೇತಾರರು ಹಂಚಿಕೊಂಡ ಅನುಭವದ ನುಡಿಗಳನ್ನು ಆಲಿಸಿದ ಬಳಿಕ ಮಾತನಾಡಿದ ಮಾಜಿ ಶಾಸಕ ಡಿ.ಆರ್.ಪಾಟೀಲ್ ನಿಮ್ಮ ಅನುಭವವೇ ನಮ್ಮೆಲ್ಲರಿಗೂ ಸ್ಪೂರ್ತಿ. ನಿಮ್ಮ ಜೀವನ ಮೌಲ್ಯ ಆದರ್ಶಗಳು ಎಲ್ಲರಿಗೂ ಮುನ್ನೆಡೆಯಲು ಸಹಕಾರಿ ಎಂದರು.
ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದ್ದು, ಅಮೃತ ಮಹೋತ್ಸವ ಆಚರಿಸಲಾಗುತ್ತಿದೆ. ಇಂತಹ ಅಮೂಲ್ಯ ಸಂದರ್ಭದ ಆಚರಣೆಯಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹಿರಿಯ ಚೇತನ ಹೋರಾಟಗಾರರನ್ನು ಸನ್ಮಾನಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ನಂತರ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷ ಎಸ್.ಪಿ.ಬಳಿಗಾರ ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರ ಸಾಧನೆಗಳನ್ನು ಮೆಲಕು ಹಾಕಿದರು..
ಈ ಸಂದರ್ಭದಲ್ಲಿ ಅಂಬರೀಶ ತೆಂಬದಮನಿ ಫಕ್ಕೀರೇಶ ಮ್ಯಾಟನವರ ಟಿ.ಈಶ್ವರ, ಜಯಕ್ಕ ಕಳ್ಳಿ, ಪರಮೇಶ ಲಮಾಣಿ, ಸೋಮು ಲಮಾಣಿ, ಜಿ.ಎಸ್.ಗಡ್ಡದೇವಮಠ ಸೇರಿದಂತೆ ಅನೇಕರು ಹಾಜರಿದ್ದರು.
Kshetra Samachara
14/08/2021 05:10 pm