ಹುಬ್ಬಳ್ಳಿ: ಕಳೆದ ಸುಮಾರು ದಿನಗಳಿಂದ ಚುನಾಯಿತ ಪ್ರತಿನಿಧಿಗಳಿಲ್ಲದ ಮಹಾನಗರ ಪಾಲಿಕೆಗೆ ಚುನಾವಣಾ ದಿನಾಂಕ ನಿಗದಿಯಾಗುತ್ತಿದ್ದಂತೆಯೇ ರಾಜಕೀಯ ಪಕ್ಷಗಳು ಕಾರ್ಯಾಚರಣೆ ಚುರುಕುಗೊಳಿವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಈಗ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಟಿಕೆಟ್ ವಿತರಣೆ ಮಾಡಲು ಅರ್ಜಿ ಆಹ್ವಾನಿಸಿದೆ.
ಹೌದು..ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸುವ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳಿಗೆ ಅರ್ಜಿ ಸಲ್ಲಿಸಲು ಸೂಚನೆ ನೀಡಿದ್ದು, ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಇಚ್ಚಿಸುವ ಟಿಕೆಟ್ ಆಕಾಂಕ್ಷಿಗಳು, ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿರುವ ಮಹಾನಗರ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯಕ್ಕೆ ಬಂದು, ಪಕ್ಷದ ಅರ್ಜಿ ಫಾರ್ಮ ತೆಗೆದುಕೊಂಡು ಅಗಸ್ಟ್ 15ರ ಸಂಜೆ 5 ಗಂಟೆಯ ಒಳಗಾಗಿ ತುಂಬಿದ ಅರ್ಜಿಯ ಜತೆ, ಕೆಪಿಸಿಸಿ ವತಿಯಿಂದ ನಿರ್ಧರಿಸಲಾಗಿರುವ ಅರ್ಜಿ ಶುಲ್ಕವನ್ನು ಬ್ಯಾಂಕ್ ಡಿಡಿ ಮುಖಾಂತರ ಸಂದಾಯ ಮಾಡಬೇಕು ಎಂದು ಸೂಚನೆ ನೀಡಿದೆ.
ಕಾಂಗ್ರೆಸ್, ಜೆಡಿಎಸ್, ಬಿಜೆಪಿ, ಪ್ರಜಾಕೀಯ, ಆಮ್ ಆದ್ಮಿ ಪಾರ್ಟಿ ಹಾಗೂ ಶಿವಸೇನಾದಿಂದ ಅಭ್ಯರ್ಥಿಗಳ ಆಯ್ಕೆಯ ಕಾರ್ಯ ಸಾಕಷ್ಟು ಭರದಿಂದ ಸಾಗಿದೆ. 82 ವಾರ್ಡ್ ಗಳ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕಾಂಗ್ರೆಸ್ ಹೊಸ ನಿರ್ಧಾರವನ್ನು ಕೈಗೊಂಡಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
Kshetra Samachara
13/08/2021 07:57 pm