ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : 2ಎ ಮೀಸಲಾತಿ ಮರೆತ ಸರ್ಕಾರ, ಮತ್ತೆ ದುಂಡು ಮೇಜಿನ ಸಭೆ

ಕುಂದಗೋಳ : ಈ ಹಿಂದೆ ಕರ್ನಾಟಕ ಘನ ಸರ್ಕಾರ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುತ್ತೇವೆ ಎಂದು ಹೇಳಿತ್ತು ಆ ಮಾತನ್ನ ಸರ್ಕಾರಕ್ಕೆ ಮರಳಿ ನೆನಪು ಮಾಡುವ ಉದ್ದೇಶದಿಂದ ಅಗಸ್ಟ್ 12 ನಾಳೆ ಹುಬ್ಬಳ್ಳಿಯ ಗೋಕುಲ ಕ್ಯೂವಿಸ್ಕ್ ಹೊಟೇಲ್'ನಲ್ಲಿ ಪಂಚಮಸಾಲಿ ಸಮಾಜದ ಬಾಂಧವರ ದುಂಡು ಮೇಜಿನ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಕೂಡಲ ಸಂಗಮ ಶ್ರೀ ಜಯ ಮೃತ್ಯುಂಜಯ ಮಹಾಸ್ವಾಮಿಗಳು ಹೇಳಿದರು.

ಅವರು ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ಕಾರ್ಯಕ್ರಮಕ್ಕೆ ಆಗಮಿಸಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿ ಬಿಜೆಪಿ ಸರ್ಕಾರ ಈ ಹಿಂದೆ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಲು ಆರು ತಿಂಗಳು ಸಮಯ ಪಡೆದಿತ್ತು. ಮರಳಿ ಆ ಬಗ್ಗೆ ಇನ್ನೂ ಯಾವುದೇ ಪ್ರಸ್ತಾಪ ಮಾಡಿಲ್ಲ. ಈ ಕಾರಣದಿಂದ ನಾಳೆ ದುಂಡು ಮೇಜಿನ ಸಭೆ ಹಮ್ಮಿಕೊಳ್ಳಲಾಗಿದೆ ಪಂಚಮಸಾಲಿ ಸಮಾಜದ ಎಲ್ಲ ನಗರ ಪಟ್ಟಣರ ಗ್ರಾಮೀಣ ರಾಜಕೀಯದ ಎಲ್ಲ ಮುಖಂಡರು ಭಾಗವಹಿಸಿ ಎಂದರು.

Edited By : Nagesh Gaonkar
Kshetra Samachara

Kshetra Samachara

11/08/2021 07:47 pm

Cinque Terre

25.27 K

Cinque Terre

0

ಸಂಬಂಧಿತ ಸುದ್ದಿ