ಕಲಘಟಗಿ: ಉತ್ತರ ಕನ್ನಡ ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿರುವ ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಮಾರ್ಗಮಧ್ಯೆ ಮಾಜಿ ಕ್ಯಾಬಿನೆಟ್ ಸಚಿವರಾದ ಸಂತೋಷ್ ಲಾಡ್ ಅವರ ಕಲಘಟಗಿ ಹತ್ತಿರದ ಮಡ್ಕಿಹೊನ್ನಳ್ಳಿಯಲ್ಲಿನ ಅಮೃತ ನಿವಾಸಕ್ಕೆ ಆಗಮಿಸುವ ಹಿನ್ನಲೆಯಲ್ಲಿ ಅಪಾರ ಕಾಂಗ್ರೆಸ್ ಕಾರ್ಯಕರ್ತರು ಆಗಮಿಸಿದ್ದರು.
ಕ್ಷೇತ್ರದ ಅಳ್ನವಾರ ಹಾಗೂ ಕಲಘಟಗಿಯ ಗ್ರಾಮೀಣ ಭಾಗದ ಕಾರ್ಯಕರ್ತರು ಲಾಡ್ ಅವರ ನಿವಾಸದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ನೋಡಲು ಸಂಜೆ ವೇಳೆ ನೆರೆದಿದ್ದರು.ಇದರಿಂದ ಕಲಘಟಗಿ ತಡಸ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿತ್ತು.
Kshetra Samachara
01/08/2021 06:17 pm