ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಡಿಕೆಶಿ, ಹೆಬ್ಬಾಳಕರ ನನ್ನ ಕಿಸ್ದಾಗ ಇದ್ದಾರ! ವಿವಾದ ಸೃಷ್ಟಿಸಿದ ರಜತ್ ಉಳ್ಳಾಗಡ್ಡಿಮಠ ಮಾತು

ಹುಬ್ಬಳ್ಳಿ- ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಗಾಳಿ ಬಿಸುತ್ತುರುವ ಬೆನ್ನಲ್ಲೇ, ಕಾಂಗ್ರೆಸ್ ಸಂಘಟನೆ ಜಪಕ್ಕೆ ಮುಂದಾಗಿದೆ. ಹೀಗಿದ್ದರೂ ಪಕ್ಷದಲ್ಲಿ ಅಸಮಾಧಾನದ ಹೊಗೆ ಕಾಣಿಸುತ್ತಿದೆ. ಇದಕ್ಕೆ ಸಾಕ್ಷಿಯಾಗಿ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಹೌದು,,, ನಿನ್ನೆ ದಿನದಂದು ನಗರದ ಖಾಸಗಿ ಹೊಟೇಲ್ ನಲ್ಲಿ ವಿವಿಧ ಜಿಲ್ಲೆಗಳ ವಿಭಾಗೀಯ ನಾಯಕರ ಸಭೆ ನಡೆಸಲಾಗಿತ್ತು. ಅದರಲ್ಲಿ ಬೆಳಗಾವಿ, ಹುಬ್ಬಳ್ಳಿ ಧಾರವಾಡ, ಹಾವೇರಿ, ಗದಗ, ಚಿಕ್ಕೋಡಿ, ಬಾಗಲಕೋಟ, ಬಿಜಾಪುರ‌ ಜಿಲ್ಲಾ ನಾಯಕರ ಜೊತೆ ಸಮಾಲೋಚನೆ ಸಭೆ ಮಾಡುವಾಗ ದೊಡ್ಡದೊಂದು ಆವಾಂತರವೇ ನಡೆದಿದೆ.

ಧಾರವಾಡ ಜಿಲ್ಲೆಯ ಮುಖಂಡರ ಸಭೆ ನಡೆಯುತ್ತಿದ್ದ ಸಮಯದಲ್ಲಿ, ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಗಿರೀಶ ಗದಿಗೆಪ್ಪಗೌಡರ, ಒಳಗಡೆ ಬಂದು ಹು-ಧಾ ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷ ರಜತ ಉಳಾಗಡ್ಡಿಮಠನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಎದುರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

ದಲಿತ ಯುವಕನ ಸ್ಥಾನವನ್ನ ಪಡೆದುದಲ್ಲದೇ, ಲಕ್ಷ್ಮೀ ಹೆಬ್ಬಾಳ್ಕರ ಹಾಗೂ ಡಿ.ಕೆ.ಶಿವುಕುಮಾರ ನನ್ನ ಕಿಸೆಯಲ್ಲಿದ್ದಾರೆಂದು ಹೇಳಿಕೊಳ್ಳುತ್ತಾರೆಂದು ಉಸ್ತುವಾರಿಗಳ ಮುಂದೆ, ತರಾಟೆಗೆ ತೆಗದುಕೊಂಡಿರುವ ಇದೀಗ ಎಲ್ಲೆಡೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Edited By : Nagesh Gaonkar
Kshetra Samachara

Kshetra Samachara

31/07/2021 03:02 pm

Cinque Terre

42.32 K

Cinque Terre

11

ಸಂಬಂಧಿತ ಸುದ್ದಿ