ಹುಬ್ಬಳ್ಳಿ: ನಮ್ಮ ರಾಜ್ಯದ 25 ಜನ ಸಂಸದರು ಏನು ಮಾಡ್ತಾ ಇದ್ದಾರೆ. ರಾಜ್ಯದಲ್ಲಿ ಹುಲಿಗಳಂತೆ ಘರ್ಜನೆ ಮಾಡ್ತಾರೆ, ಮೋದಿ ಮುಂದೆ ಹೋದ್ರೆ ಇವರೆಲ್ಲರೂ ಇಲಿಗಳಾಗ್ತಾರೆ, ಎಂದು ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಬಿಜೆಪಿ ಸಂಸದರ ವಿರುದ್ಧ ಕಿಡಿ ಕಾರಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಶಾಸಕ ಹಾಗೂ ಜೆಡಿಎಸ್ ಯುವ ಮುಖಂಡ ಮಧು ಬಂಗಾರಪ್ಪ ಅವರು, ಕಾಂಗ್ರೆಸ್ ಸೇರ್ಪಡೆಯಾಗಿದ್ದು ಪಕ್ಷಕ್ಕೆ ಮತ್ತಷ್ಟು ಶಕ್ತಿ ತುಂಬಿದಂತಾಗಿದೆ. ಇನ್ನೂ ಹಲವು ನಾಯಕರು ಸದ್ಯದಲ್ಲೇ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂದರು.
ದಿ.ಮಾಜಿ ಸಿಎಂ ಅವರ ಪುತ್ರ ಮಧು ಬಂಗಾರಪ್ಪ ಅವರು ಪಕ್ಷದ ಆಡಳಿತ ನೀತಿ ತಿಳಿದುಕೊಂಡವರು, ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಕಾರ್ಯನಿರ್ವಹಿಸಲು ಇಂದು ಪಕ್ಷಕ್ಕೆ ಸೇರ್ಪಡೆಯಾದರು. ಇನ್ಮೂ ನೆರೆಯಿಂದ ರಾಜ್ಯದ ಜನ ಸಂಕಷ್ಟದಲ್ಲಿದ್ದಾರೆ. ಆದ್ರೆ ಕೇಂದ್ರದಿಂದ ನೈಯಾಪೈಸೆ ಹಣ ಬಂದಿಲ್ಲ. ಆದಷ್ಟು ಬೇಗ ಸರ್ಕಾರ ರಾಜ್ಯದ ಜನತೆಗೆ ಪರಿಹಾರ ನೀಡಬೇಕೆಂದು ಒತ್ತಾಯ ಮಾಡಿದರು.
Kshetra Samachara
30/07/2021 12:36 pm