ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ; ಶಾಸಕ ಅಮೃತ

ಧಾರವಾಡ: ಇದೇ ಪ್ರಥಮ ಬಾರಿಗೆ ಶಾಸಕನಾಗಿ, ಜನಸೇವಕನಾಗಿ ಆಯ್ಕೆಯಾಗಿರುವ ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಈ ಕುರಿತು ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಯಾವುದೇ ಗೊಂದಲಮಯವಾದ ಪೋಸ್ಟ್‌ಗಳನ್ನು ಹಾಕುವುದು ಬೇಡ ಎಂದು ಶಾಸಕ ಅಮೃತ ದೇಸಾಯಿ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಶುಕ್ರವಾರ ಪತ್ರಿಕಾ ಪ್ರಕಟನೆ ನೀಡಿರುವ ಅವರು, ನನ್ನ ಕ್ಷೇತ್ರದ ಅಭಿವೃದ್ಧಿಗೆ ಪಕ್ಷದ ನಾಯಕರು ಹಾಗೂ ಸಚಿವರು ಸಾಕಷ್ಟು ಸಹಕಾರ ನೀಡಿದ್ದಾರೆ‌. ಅದು ನನಗೆ ತೃಪ್ತಿ ತಂದಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ಸಹಕಾರ, ಬೆಂಬಲ ನೀಡುವ ವಿಶ್ವಾಸವಿದೆ. ದಯವಿಟ್ಟು ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ನನಗೆ ಸಚಿವ ಸ್ಥಾನ ನೀಡಬೇಕು ಎಂಬ ಒತ್ತಾಯ ಮಾಡುವುದು ಬೇಡ ಎಂದು ಶಾಸಕ ಅಮೃತ ದೇಸಾಯಿಯವರು ವಿನಂತಿಸಿಕೊಂಡಿದ್ದಾರೆ.

Edited By : Vijay Kumar
Kshetra Samachara

Kshetra Samachara

30/07/2021 11:52 am

Cinque Terre

16.99 K

Cinque Terre

4

ಸಂಬಂಧಿತ ಸುದ್ದಿ