ಅಳ್ನಾವರ: ಅಳ್ನಾವರ ತಾಲೂಕಿನಾದ್ಯಂತ ಮೊನ್ನೆ ಸುರಿದ ಅಕಾಲಿಕ ಮಳೆಯಿಂದಾಗಿ ಹುಲಿಕೇರಿ ಗ್ರಾಮದ ಇಂದಿರಮ್ಮನ ಕೆರೆಯ ತಡೆ ಗೋಡೆ ಕುಸಿದು ಅಪಾರ ಮಟ್ಟದ ಹಾನಿಯುಂಟಾಗಿದ್ದು, ಇದರ ವೀಕ್ಷಣೆಗಾಗಿ ಮಾಜಿ ಶಾಸಕ ಸಂತೋಷ ಲಾಡ್ ನಿನ್ನೆ (ಗುರುವಾರ) ಭೇಟಿ ನೀಡಿದರು.
ಕೆರೆಯ ತಡೆಗೋಡೆ ಒಡೆದು ಹಳ್ಳದ ಮುಖಾಂತರ ಭಾರಿ ಪ್ರಮಾಣದ ನೀರು ಹರಿದು ಹೋಗಿದ್ದು, ರೈತರ ಬೆಳೆಗಳಿಗೆ ಹಾನಿ ಉಂಟಾಗಿದೆ. ರೈತರು ತಮ್ಮ ಜಮೀನಿಗೆ ಹೋಗುವ ರಸ್ತೆ ಮಣ್ಣಿನಿಂದ ಮುಚ್ಚಿ ಹೋಗಿದ್ದು, ಇದನ್ನು ತಮ್ಮ ಸ್ವಂತ ಹಣದಿಂದ ತೆರುವು ಗೊಳಿಸಿ, ರಸ್ತೆ ರಿಪೇರಿ ಮಾಡಲು ತಮ್ಮ ಕಾರ್ಯಕರ್ತರಿಗೆ ಸೂಚಿಸಿದರು.
ಜೊತೆಗೆ ನೀರಾವರಿ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಕೆರೆಯ ಮುಂದಿನ ದುರಸ್ತಿ ಕಾಮಗಾರಿ ಕುರಿತು ಮಾಹಿತಿ ಕೇಳಿದರು. ಮಾನ್ಯ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಬೆಳೆ ಹಾನಿಯ ಕುರಿತು ಚರ್ಚೆ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು,ಕಾರ್ಯಕರ್ತರು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರು ಉಪಸ್ಥಿತರಿದ್ದರು.
Kshetra Samachara
30/07/2021 11:19 am