ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಕರ್ನಾಟಕ ಸಂಗ್ರಾಮ ಸೇನೆಯಿಂದ ನಾಡು ನುಡಿ ಜಾಗೃತಿ

ಕಲಘಟಗಿ: ಕರ್ನಾಟಕ ಸಂಗ್ರಾಮ ಸೇನೆ ತಾಲೂಕಾ ಘಟಕದಿಂದ ಕಲಘಟಗಿ ಪಟ್ಟಣದ ಜನತಾ ಇಂಗ್ಲೀಷ್ ಶಾಲೆಯಲ್ಲಿ "ನಾಡು ನುಡಿ ಜಾಗೃತಿ" ಮತ್ತು ತಾಲೂಕಿನ ಸರಕಾರಿ ಅಧಿಕಾರಿಗಳಿಗೆ ಸನ್ಮಾನ ಹಮ್ಮಿಕೊಳ್ಳಲಾಗಿತ್ತು.

ತಹಶೀಲ್ದಾರ ಅಶೋಕ ಶಿಗ್ಗಾವಿ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ,ಕನ್ನಡ ನಾಡು ನುಡಿಯ ರಕ್ಷಣೆಯ ವಿಚಾರದಲ್ಲಿ ಎಲ್ಲರು ಜಾಗೃತರಾಗಿರ ಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕ ಸಂಗ್ರಾಮ ಸೇನೆಯ ಅಧ್ಯಕ್ಷ ಸಾತಪ್ಪ ಕುಂಕೂರ,ಉಪಾಧ್ಯಕ್ಷ ಶಂಕರಗೌಡ ಭಾವಿಕಟ್ಟಿ,ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಪುರದನಗೌಡರ,ರಮೇಶ ಸೋಲಾರಗೊಪ್ಪ,ಎಂ ಆರ್ ತೋಟಗಂಟಿ,ಯುವ ಮುಖಂಡ ಫಕ್ಕಿರಗೌಡ ಪಾಟೀಲ,ಸಾಹಿತಿ ಕೆ ಬಿ‌ ಪಾಟೀಲ ಕುಲಕರ್ಣಿ,ಶ್ರೀಧರ ಪಾಟೀಲಕುಲಕರ್ಣಿ,ಪರಮೇಶ ಕುರಟ್ಟಿ,ಉದಯ ಗೌಡರ,ಪರಶುರಾಮ ಹುಲಿಹೊಂಡ

ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

01/03/2021 07:55 pm

Cinque Terre

21.59 K

Cinque Terre

0

ಸಂಬಂಧಿತ ಸುದ್ದಿ