ಕುಂದಗೋಳ : ಕಳೆದ ದಿನಗಳಿಂದ ಬಾಲೇಹೊಸೂರಿನ ದಿಂಗಾಲೇಶ್ವರ ಮಹಾಸ್ವಾಮಿಗಳು ಮೂರು ಸಾವಿರ ಮಠದ ಜಾಗದಲ್ಲಿ ಕೆ.ಎಲ್.ಇ ಸಂಸ್ಥೆ ನಿರ್ಮಾಣ ಮಾಡುತ್ತಿರುವ ಮೆಡಿಕಲ್ ಕಾಲೇಜು ವಿಚಾರವಾಗಿ ಕೆ.ಎಲ್.ಇ ಸಂಸ್ಥೆ ಕುರಿತಾಗಿ ನೀಡುತ್ತಿರುವ ಹೇಳಿಕೆಗಳನ್ನು ಕೈ ಬಿಡುವಂತೆ ಸಂಶಿ ಕೆ.ಎಲ್.ಇ ಕಾಲೇಜು ಅಧ್ಯಕ್ಷ ಅಂದಾನೆಪ್ಪ ಉಪ್ಪಿನ ಹೇಳಿದರು.
ಅವರು ಕುಂದಗೋಳ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿ ದಿಂಗಾಲೇಶ್ವರ ಮಹಾಸ್ವಾಮಿಗಳು ಹಾಗೂ ಮೂರು ಸಾವಿರ ಮಠದ ಉತ್ತರಾಧಿಕಾರದ ವಿವಾದ ಅವರವರಿಗೆ ಬಿಟ್ಟಿದ್ದು.
ಈ ಹಿಂದಿನ ಮೂರು ಸಾವಿರಮಠದ ಪರಮಪೂಜ್ಯ ಗುರುಶಿದ್ಧೇಶ್ವರ ಮಹಾಸ್ವಾಮಿಗಳು ಗಬ್ಬೂರು ಬಳಿ ಇರುವ 23 ಏಕರೆ ಜಾಗವನ್ನು ಮೆಡಿಕಲ್ ಕಾಲೇಜು ಕಟ್ಟಲು ದಾನ ನೀಡಿದ್ದಾರೆ ಅದರಂತೆ ನಾವು ಕಾರ್ಯ ಕೈಗೊಂಡಿದ್ದೇವೆ.
ದಿಂಗಾಲೇಶ್ವರ ಶ್ರೀಗಳು ಮಠದ ಆಸ್ತಿ ಉಳಿವಿಗಾಗಿ ಜನ ಜಾಗೃತಿ ಸಮಾವೇಶ ಮಾಡುವುದಕ್ಕೆ ನಮಗೆ ಸಹಮತವಿದೆ. ಆದರೆ ಕೆ.ಎಲ್.ಇ ಸಂಸ್ಥೆ ಹಾಗೂ ಆಡಳಿತ ಮಂಡಳಿ ಪರವಾಗಿ ಹಗುರವಾಗಿ ಮಾತನಾಡಬೇಡಿ ಎಂದರು.
ಬಳಿಕ ಸಂಶಿ ವಿರಕ್ತಮಠದ ಚನ್ನಬಸವ ಸ್ವಾಮೀಜಿ ಮಾತನಾಡಿ ಊರಿಗೊಂದು ಮಠ ಆ ಮಠದ ಸ್ವಾಮೀಜಿ ಆ ಊರಿನ ಅಭಿವೃದ್ಧಿಗೆ ಶ್ರಮಿಸಬೇಕೆ ಹೊರತು ಎಲ್ಲಾ ಕಡೆ ಭಾಗವಹಿಸಬಾರದು. ಈ ಕೆ.ಎಲ್.ಇ ಕಾಲೇಜು ನಿರ್ಮಾಣ ನಮ್ಮ ಭಾಗದ ಜನರಿಗೆ ಸಂತಸದ ವಿಚಾರ ಅದಕ್ಕೆ ಪೂಜ್ಯರಿಂದ ತಡೆ ಬೇಡಾ ಎಂದರು.
ಈ ಸಂದರ್ಭದಲ್ಲಿ ಐ.ಎಮ್.ನಾವಳ್ಳಿ, ಶೇಖಣ್ಣ ಹರಕುಣಿ, ಸುರೇಶ್ ಸವಣೂರು, ಶಂಕರಗೌಡ ದೊಡ್ಡಮನಿ, ಶರೀಫ್ ಮುಡಿಸಿಬನ, ವಾಸು ಗಂಗಾಯಿ, ರಮೇಶ್ ಅತ್ತಿಗೇರಿ, ಹಾಗೂ ಇತರರು ಉಪಸ್ಥಿತರಿದ್ದರು.
Kshetra Samachara
01/03/2021 12:42 pm