ಧಾರವಾಡ: ಶಾಸಕರಿಗೆ ಧಿಕ್ಕಾರ ಎನ್ನುತ್ತ ಅವರ ಮನೆಗೆ ಮುತ್ತಿಗೆ ಹಾಕಲು ಬಂದ ಪ್ರತಿಭಟನಾಕಾರರಿಗೆ ಶಾಸಕ ಅಮೃತ ದೇಸಾಯಿ ಮಜ್ಜಿಗೆ ನೀಡುವ ಮೂಲಕ ಪ್ರತಿಭಟನಾಕಾರರ 'ದಣಿ'ವು ನೀಗಿಸಿದ್ದಾರೆ.
ನೀರಿನ ಬಿಲ್ ಮನ್ನಾ ಮಾಡುವಂತೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಶಾಸಕರ ಮನೆಗೆ ಮುತ್ತಿಗೆ ಹಾಕಲು ಬಂದ ಸಾರ್ವಜನಿಕರಿಗೆ ಶಾಸಕರ ಆಪ್ತ ಸಹಾಯಕರು ಅವರ ಮನೆ ಮುಂದೆಯೇ ಮಜ್ಜಿಗೆ ಪ್ಯಾಕೇಟ್ ಗಳನ್ನು ನೀಡಿ ಬಿಸಿಲಿನಲ್ಲಿ ಅವರ ದಾಹ ನೀಗಿಸಿದ್ದಾರೆ.
ಶಾಸಕರು ಪ್ರತಿಭಟನಾಕಾರರ ಅಹವಾಲು ಆಲಿಸಿ, ಮನವಿ ಪಡೆದರು. ನಂತರ ಪ್ರತಿಭಟನಾಕರರಿಗೆ ಮಜ್ಜಿಗೆ ವಿತರಿಸಲಾಯಿತು.
Kshetra Samachara
28/02/2021 03:58 pm