ನವಲಗುಂದ: ಪಟ್ಟಣದ ಪುರಸಭೆಯಲ್ಲಿ ಅಭಿವೃದ್ಧಿಯ 2021-22ನೇ ಸಾಲಿನ ಬಜೆಟ್‌ನಲ್ಲಿ ಕೈಗೊಳ್ಳುವ ಕಾಮಗಾರಿಗಳು ಮತ್ತು ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ಯಾವ ಕ್ರಮಗಳನ್ನು ಹಾಗೂ ಬಜೆಟ್‌ನಲ್ಲಿ ಎಷ್ಟು ಅನುದಾನವನ್ನು ಮಂಜೂರಾತಿ ಮಾಡಬೇಕೆಂದು ಸಾರ್ವಜನಿಕರಿಂದ ಚರ್ಚೆಗೆ ಕರೆಯಲಾಗಿತ್ತು.
ಚರ್ಚೆಯಲ್ಲಿ ಸಾರ್ವಜನಿಕರು ಪ್ರಮುಖವಾಗಿ ಮೂಲ ಸೌಕರ್ಯಗಳಾದ ಪ್ರಮುಖ ರಸ್ತೆ, ಗಟಾರು, ಓಣಿಗಳಲ್ಲಿ ಸಿ.ಸಿ. ರಸ್ತೆ, ಪಟ್ಟಣದಲ್ಲಿನ ವಿದ್ಯುತ್ ಕಂಬಗಳ ಅಳವಡಿಸುವುದು, ನೀರಿನ ಅಭಾವ ಹಾಗೂ ಪ್ರಮುಖವಾಗಿ ಒಳಚರಂಡಿ ವ್ಯವಸ್ಥೆ ಮತ್ತು 24 ಗಂಟೆಗಳ ಕಾಲ ಕುಡಿಯುವ ನೀರಿನ ಯೋಜನೆ, ಪಟ್ಟಣದ ವ್ಯಾಪ್ತಿಯನ್ನು 3 ಕಿ.ಮೀ.ವರೆಗೆ ವಿಸ್ತರಣೆ ಮಾಡಬೇಕು ಸೇರಿದಂತೆ ಇನ್ನು ಅನೇಕ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಈ ವೇಳೆ ಪುರಸಭೆ ಅಧ್ಯಕ್ಷ ಮಂಜುನಾಥ್ ಜಾಧವ್, ಪುರಸಭೆ ಮುಖ್ಯಾಧಿಕಾರಿ ಎನ್ ಎಚ್ ಖುದಾನವರ, ಉಪಾಧ್ಯಕ್ಷ ಬೈರೂನು, ದೇವಪ್ಪ ಯರಗುಪ್ಪಿ, ಬಬರ್ಚಿ, ರೈಮಾನ್‌ಸಾಬ್ ಧಾರವಾಡ, ನಿಂಗಪ್ಪ ಅಸುಂಡಿ, ಲಕ್ಷ್ಮೀನಾರಾಯಣ, ರಾಯನಗೌಡ ಪಾಟೀಲ ಹಾಗೂ 23 ವಾರ್ಡ್‌ನ ಜನಪ್ರತಿನಿಧಿಗಳು ಅಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
23/02/2021 10:19 am