ಹುಬ್ಬಳ್ಳಿ- ಟೈಲ್ಸ್ ಉತ್ಪಾದನಾ ಕಾರ್ಖಾನೆಯನ್ನು ಹುಟ್ಟಿದ ರಾಜ್ಯದಲ್ಲಿ ಪ್ರಾರಂಭಿಸಿ, ಸುತ್ತಮುತ್ತಲಿನ ಹಳ್ಳಿ ಜನರಿಗೆ ಉದ್ಯೋಗ ಕೊಡುವ ದೃಷ್ಟಿಯಿಂದ, ಗದಗ ಜಿಲ್ಲೆಯ ಬೆಟಗೇರಿ ಹತ್ತಿರ 12 ಎಕರೆ ಭೂಮಿಯನ್ನು ಖರೀದಿಸಿ ಅದರಲ್ಲಿ 5 ಎಕರೆ ಪ್ರದೇಶದಲ್ಲಿ ಪ್ಯಾಕ್ಟರಿ ಪ್ರಾರಂಭಿಸಿದ್ದರು. ಆದರೆ ಹಣಕ್ಕಾಗಿ ಬೇಡಿಕೆ ಇಟ್ಟ ಕೆಲ ಕಿಡೆಗೆಡಿಗಳಿಂದ ಈಗ ಪ್ಯಾಕ್ಟರಿ ಮುಚ್ಚಿಕೊಂಡು ಹೋಗಿದ್ದರಿಂದ ಈ ಬಂಡವಾಳ ಶಾಹಿಗಳು ಬೀದಿ ಪಾಲಾಗಿದ್ದಾರೆ..
ಟೈಲ್ಸ್ ಪ್ಯಾಕ್ಟರಿಗೆ ಸುಮಾರು 50 ಕೋಟಿ ರೂಪಾಯಿ ಬಂಡವಾಳ ಬೇಕಾಗಿರುವುದರಿಂದ, ಹುಬ್ಬಳ್ಳಿಯ ಕಾರ್ಪೊರೇಷನ್ ಬ್ಯಾಂಕ್ ಎನ್.ಸಿ.ಎಮ್ ಶಾಖೆಯ ಮುಖಾಂತರ ಸುಮಾರು 27 ಕೋಟಿ ರೂಪಾಯಿ ಸಾಲ ಪಡೆದು, 500 ಕಾರ್ಮಿಕರಿಗೆ ಉದ್ಯೋಗ ನೀಡಿದ್ದರು. ಈಗ ಕೆಲ ಕಿಡಿಗೇಡಿಗಳ ಸುಳ್ಳ ಮಾಹಿತಿಯಿಂದಾಗಿ ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಈ ಪ್ಯಾಕ್ಟರಿ ಬಂದ್ ಆಗಿದೆ ಎಂದು ಮಾಲೀಕರು ಆರೋಪ ಮಾಡುತ್ತಿದ್ದಾರೆ..
Kshetra Samachara
22/02/2021 01:29 pm