ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸಿದ್ದ'ರಾಮ'ಯ್ಯ ರಾಮಮಂದಿರಕ್ಕೆ ದೇಣಿಗೆ ನೀಡದಿದ್ದರೇನಂತೆ

ಧಾರವಾಡ: ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡದಿದ್ದರೇನಂತೆ ಮಂದಿರ ನಿರ್ಮಾಣ ಆಗೇ ಆಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ರಾಮಮಂದಿರಕ್ಕೆ ದೇಣಿಗೆ ನೀಡೋದಿಲ್ಲ ಎಂಬ ಹೇಳಿಕೆ ನೀಡಬಾರದು. ಅವರ ಹೇಳಿಕೆ ಅವರ ಹೆಸರಿಕೆ ಕಪ್ಪು ಚುಕ್ಕೆ ಎಂದರು.

ಪಿಎಫ್ಐ ಹಾಗೂ ಸಿದ್ದರಾಮಯ್ಯ ಒಂದೇ ಟೀಮ್ ನವರು. ಅವರು ಇದನ್ನು ವೋಟ್ ಬ್ಯಾಂಕ್ ರಾಜಕಾರಣ ಎಂದುಕೊಂಡಿದ್ದಾರೆ. ಪಿಎಫ್ಐನವರಿಗೆ ಆರ್ ಎಸ್ಎಸ್ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಆರ್ ಎಸ್ಎಸ್ ಒಂದು ದೇಶಭಕ್ತ ಸಂಘಟನೆ ಎಂದರು.

ಐಎಂಎ ಹಗರಣದಲ್ಲಿ ಯಾರೇ ಇದ್ದರೂ ಹೊರಗೆ ಬರಲಿ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಅದರಲ್ಲಿ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಇದ್ದರೂ ಗೊತ್ತಾಗಲಿ ಎಂದು ಶೆಟ್ಟರ್ ಹೇಳಿದರು.

Edited By : Nagesh Gaonkar
Kshetra Samachara

Kshetra Samachara

21/02/2021 03:05 pm

Cinque Terre

35.55 K

Cinque Terre

10

ಸಂಬಂಧಿತ ಸುದ್ದಿ