ಹುಬ್ಬಳ್ಳಿ: ಅದು ಉತ್ತರ ಕರ್ನಾಟಕದ ಪ್ರತಿಷ್ಠಿತ ಮಠಗಳಲ್ಲಿ ಒಂದಾಗಿರುವ ಮಠ.ಈ ಮಠದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ವಿವಾದಗಳು ಸೃಷ್ಟಿಯಾಗುತ್ತಲೇ ಇದೆ.ಈಗ ನಡೆಯುತ್ತಿರುವ ವಿವಾದಕ್ಕೆ ಪುಷ್ಟಿ ನೀಡುವಂತೆ ಅಖಿಲ ಭಾರತ ವೀರಶೈವ ಮಹಾಸಭಾ ಬೆಂಬಲಕ್ಕೆ ಮುಂದಾಗಿದೆ.ಅಷ್ಟಕ್ಕೂ ಯಾವುದು ಆ ಮಠ..? ಅಖಿಲ ಭಾರತ ವೀರಶೈವ ಮಹಾಸಭಾದ ನಿರ್ಧಾರ ಆದರೂ ಏನು ಅಂತೀರಾ ಈ ಸ್ಟೋರಿ ನೋಡಿ..
ವಾಣಿಜ್ಯನಗರಿ ಹುಬ್ಬಳ್ಳಿಯ ಮೂರುಸಾವಿರಮಠದಲ್ಲಿ ಇಷ್ಟುದಿನ ಉತ್ತರಾಧಿಕಾರದ ವಿವಾದ ಬುಗಿಲೆದ್ದಿತ್ತು.ಈಗ ಕೆಎಲ್ಇ ಸಂಸ್ಥೆಗೆ ಮೂರುಸಾವಿರಮಠದ ಆಸ್ತಿ ದಾನ ನೀಡಿರುವ ವಿವಾದವೊಂದು ಮುನ್ನೆಲೆಗೆ ಬಂದಿದ್ದು,ಕೆಎಲ್ಇ ಸಂಸ್ಥೆಯ ವಿರುದ್ಧ ಬಾಲೇಹೊಸೂರಿನ ದಿಂಗಾಲೇಶ್ವರ ಶ್ರೀಗಳು ಹಾಗೂ ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಕೆಎಲ್ಇ ಸಂಸ್ಥೆ ಆರೋಪ ಪ್ರತ್ಯಾರೋಪ ಮಾಡುತ್ತಿದ್ದು,ಆಸ್ತಿ ದಾನ ನೀಡಿರುವ ಕುರಿತು ಎದ್ದಿರುವ ಗೊಂದಲಕ್ಕೆ ಅಂತ್ಯ ಕಾಣದಂತಾಗಿದ್ದು,ಈಗ ಅಖಿಲ ಭಾರತ ವೀರಶೈವ ಮಹಾಸಭಾ ಮಧ್ಯೆ ಪ್ರವೇಶ ಮಾಡಿದೆ.ಅಲ್ಲದೇ ಸುಮ್ಮನೆ ಇದ್ದರೇ ಸರಿ ಇಲ್ಲವಾದರೆ ದಿಂಗಾಲೇಶ್ವರ ಶ್ರೀಗಳ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು ಮಾಡುವ ಎಚ್ಚರಿಕೆಯನ್ನು ನೀಡಿದೆ..
ಮೂರು ಸಾವಿರ ಮಠದ ಜಾಗವನ್ನ KLE ಗೆ ನೀಡಿರುವ ಕುರಿತು ಸುದ್ದಿಗೋಷ್ಠಿ ನಡೆಸಿದ ಅಖಿಲ ಭಾರತ ವೀರಶೈವ ಮಹಾಸಭಾದ ಮುಖಂಡರು ದಿಂಗಾಲೇಶ್ವರ ಶ್ರೀಗಳಿಗೆ ಎಚ್ಚರಿಕೆ ನೀಡಿದ್ದಾರೆ. ಮೂರುಸಾವಿರಮಠದ ಮೊದಲ ಸ್ವಾಮೀಜಿಗಳು ಲೀಗಲ್ ಆಗಿಯೇ ಜಾಗ ನೀಡಿದ್ದಾರೆ.
ಆಗ ಬಾಲೆಹೊಸೂರು ದಿಂಗಾಲೇಶ್ವರ ಶ್ರೀಗಳು ಸಹ ಇದ್ದರು ಎಂದು ಹೇಳಿದ್ದಾರೆ. ಇನ್ನೂ ಹುಬ್ಬಳ್ಳಿ-ಧಾರವಾಡ ಜನತೆಗೆ ಕೆಎಲ್ಇ ಆಸ್ಪತ್ರೆ ಅನುಕೂಲವಾಗಲಿದೆ. ಅದರಿಂದ 1500 ಜನರಿಗೆ ಕೆಲಸ ಸಿಗಲಿದೆ.ಇದರಲ್ಲಿ ವಿರೋಧ ವ್ಯಕ್ತಪಡಿಸದೇ ಕೆಎಲ್ಇ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ದಿಂಗಾಲೇಶ್ವರ ಸ್ವಾಮೀಜಿ ಸಹಮತ ನೀಡಬೇಕು ಎಂದು ಆಗ್ರಹಿಸಿದರು.ಉನ್ನತ ಸಮಿತಿ ಇದೆ, ಅವರೊಂದಿಗೆ ದಿಂಗಾಲೇಶ್ವರ ಶ್ರೀ ಚರ್ಚೆ ಮಾಡಲಿ. ಕೇವಲ ಆರೋಪಗಳನ್ನು ಮಾಡುತ್ತಾ ಹೋಗಬಾರದು.ದಾನದಿಂದಲೇ ಮಠ ಬೆಳೆದಿರುತ್ತದೆ.ಆಸ್ಪತ್ರೆ ಸಹ ಮೂರು ಸಾವಿರ ಮಠದ ಹೆಸರಿನಲ್ಲೇ ಆರಂಭವಾಗಲಿದೆ.ಮುಂದಿನ ದಿನಗಳಲ್ಲಿ ದಿಂಗಾಲೇಶ್ವರ ಶ್ರೀಗಳ ವಿರುದ್ಧ ಬಂಡಾಯ ಎದ್ದೇಳುತ್ತೇವೆಂದು ಎಚ್ಚರಿಕೆ ನೀಡಿದರು.ಇನ್ನೂ ಉತ್ತರಾಧಿಕಾರಿ ಆಗುವ ಆಸೆಯಿಂದ ಈ ರೀತಿಯಾಗಿ ಮಾಡುತ್ತಿದ್ದಾರೆ. ದಿಂಗಾಲೇಶ್ವರ ಶ್ರೀಗಳ ವೈಯಕ್ತಿಕ ಮಾತುಗಳನ್ನು ಬಿಡಬೇಕು ಎಂದು ದಿಂಗಾಲೇಶ್ವರ ವಿರುದ್ಧ ಆಕ್ರೋಶಗೊಂಡರು.
ಮಠಕ್ಕಾಗಿ ಜೀವಕೊಡಲು ಸಿದ್ದವಾಗಿದ್ದೇನೆ ಎಂದು ಹೇಳುವ ದಿಂಗಾಲೇಶ್ವರ ಸ್ವಾಮೀಜಿ ಒಂದು ಕಡೆಯಾದರೇ. ಕೆಎಲ್ಇ ಸಂಸ್ಥೆ ಆಸ್ಪತ್ರೆ ಕಟ್ಟಿಯೇ ತಿರುತ್ತೇನೆ ಎಂದು ಸವಾಲು ಹಾಕಿದ ಪ್ರಭಾಕರ್ ಕೋರೆಯವರು ಒಂದು ಕಡೆಯಾಗಿದ್ದಾರೆ.ಈಗ ಅಖಿಲ ಭಾರತ ವೀರಶೈವ ಮಹಾಸಭಾ ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಲು ಮುಂದಾಗಿದ್ದು,ಒಟ್ಟಿನಲ್ಲಿ ಮೂರುಸಾವಿರಮಠದ ವಿವಾದ ಯಾವ ರೀತಿಯಲ್ಲಿ ಕೊನೆಗೊಳ್ಳುವುದೋ ಕಾದು ನೋಡಬೇಕಿದೆ..
Kshetra Samachara
16/02/2021 10:33 pm