ಧಾರವಾಡ : ಆ ಮುಖ್ಯ ಶಿಕ್ಷಕಿ ಶಾಲೆಯಲ್ಲಿ ಕಳೆದ 23 ವರ್ಷಗಳಿಂದ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ,ಇನ್ನೆನು ಸೇವೇಯಿಂದ ನಿವೃತ್ತಿ ಆಗಬೇಕಿದೆ..ಆದರೆ ಇವರು ಮಾಡಿರುವ ಕೆಲಸಎಲ್ಲ ಶಿಕ್ಷಕ ಸಮುದಾಯಕ್ಕೆ ಮಾದರಿಯಾಗಿದೆ..ಅಷ್ಟಕ್ಕೂ ಅವರು ಮಾಡಿರುವ ಕಲಸ ಎಂತದ್ದು ಅಂತಿರಾ ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ...
ಹೀಗೆ ನಿಂತಿರೋ ಮುಖ್ಯ ಶಿಕ್ಷಕಿಯ ಹೆಸರು ಶ್ರೀಮತಿ ರೇಣುಕಾ ಜಾಧವ್ , ಇವರು ಕಳೆದ 23 ವರ್ಷಗಳಿಂದ ಧಾರವಾಡ ತಾಲೂಕಿನ ನರೇಂದ್ರ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಖಾನಾಪೂರ ಎಂ, ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ..ಆದರೆ.ಇವರು ಮುಖ್ಯ ಶಿಕ್ಷಕಿಯಾಗಿ ತಮ್ಮ ಪಾಡಿಗೆ ತಾವಾಯ್ತು ಎನ್ನದೆ ಅವರು ಶಾಲೆಯ ಮಕ್ಕಳ ಅಭಿವೃದ್ದಿ ಗಾಗಿ, ಅವರು ಗ್ರಾಮದ ಶಾಲೆಯ ಉದ್ದಾರಕ್ಕೆ ಬರೊಬ್ಬರಿ 1,30,000 ಹಣವನ್ನ ದಾಣಿಗಳಿಂದ ಸಂಗ್ರಹಿಸಿ ಇವರು ಆ ಹಣವನ್ನ ಬ್ಯಾಂಕ್ ನಲ್ಲಿಟ್ಟು ಬಂದ ಬಡ್ಡಿಯ ಹಣದಿಂದ ಪ್ರತಿಬಾನ್ವಿತ ಮಕ್ಕಳಿಗೆ ಬಹುಮಾನಗಳಿಗೆ ನೀಡಲು ಹಣವನ್ನ ಸಂಗ್ರಹ ಮಾಡಿದ್ದಾರೆ...
ಇನ್ನು ಇಂದು ಶಾಲೆಯ ಮುಖ್ಯ ಶಿಕ್ಷಕಿ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಮ್ಮುಖದಲ್ಲಿ ಶಾಲೆಯ ಅಭಿವೃದ್ದಿಗಾಗಿ ದೇಣಿಗೆ ನಿಡಿದ ದಾನಿಗಳಿಗೆ ಸನ್ಮಾನವನ್ನ ಮಾಡಿ ಗೌರವಿಸಲಾಗಿದೆ..ಇನ್ನು ಗ್ರಾಮಸ್ಥರು ಕೂಡಾ ರೇಣುಕಾ ಜಾಧವ ಅವರು ಮಾಡಿರುವ ಸೇವೆಗೆ ಆಭಾರಿಯಾಗಿದ್ದಾರೆ...ಇಂತಹ ಮುಖ್ಯ ಶಿಕ್ಷಕಿಯರು ಇದ್ದರೆ ಕನ್ನಡ ಶಾಲೆಗಳು ಉದ್ದಾರ ಆಗುತ್ತವೆ..ಜೊತೆಗೆ ಇಂತವರು ಶಿಕ್ಷಣ ಕ್ಷೆತ್ರದಲ್ಲಿರಬೇಕು..ಇನ್ನು ಹೆಚ್ಚೆಚ್ಚು ಕಾಲ ಕೆಲಸದಲ್ಲಿ ತೊಡಗಬೇಕು ಎಂದು ಜನರು ಶಿಕ್ಷಕಿ ಮಾಡಿರುವ ಕೆಲಸಕ್ಕೆ ಧನ್ಯವಾದಗಳನ್ನ ಹೇಳಿದ್ದಾರೆ...
ಶಿಕ್ಷಕಿ ಅವರು ಸೇವೆ ಸಲ್ಲಿಸಿರುವ ಶಾಲೆಗೆ ಇಂತದೊಂದು ಕಾಣಿಕೆ ಕೊಡುತ್ತಿರುವುದು ಎಲ್ಲ ಶಿಕ್ಷಕ ಸಮುದಾಯಕ್ಕೆ ಮಾದರಿಯಾಗಿದೆ..
Kshetra Samachara
16/02/2021 04:10 pm