ಕಲಘಟಗಿ: ರಂಗ ಹಾಗೂ ಜಾನಪದ ಕಲೆಗಳಿಂದು ನಶಿಸಿ ಹೋಗುತ್ತಿವೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಶಿವಣ್ಣ ಅದರಗುಂಚಿ ಅಭಿಪ್ರಾಯಪಟ್ಟರು.
ಅವರು ಹನ್ನೆರಡು ಮಠದಲ್ಲಿ ಕರ್ನಾಟಕ ಜಾನಪದ ಪರಿಷತ್ ತಾಲೂಕಾ ಘಟಕ ಹಾಗೂ ಸಿರಿಗನ್ನಡ ಸಾಂಸ್ಕೃತಿಕ ಕಲಾ ಬಳಗದಿಂದ ಹಮ್ಮಿಕೊಳ್ಳಲಾಗಿದ್ದ,ಸಾಧಕರಿಗೆ ಸನ್ಮಾನ ಕಾರ್ಯದ ಅಧ್ಯಕ್ಷತೆ ವಹಸಿ ಮಾತನಾಡಿ,ಯುವಕರು ರಂಗ ಹಾಗೂ ಜಾನಪದ ಕಲೆ ಉಳಿಸಿ ಬೆಳೆಸ ಬೇಕಿದೆ ಎಂದರು.
ಶ್ರಿರೇವಣಸಿಧ್ಧ ಶಿವಾಚಾರ್ಯ ಸ್ವಾಮಿಜಿ ಸಾನಿಧ್ಯವಹಿಸಿದ್ದರು.
2019-20 ನೇ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮಲ್ಲಯ್ಯಸ್ವಾಮಿ ತೋಟಗಂಟಿ,ಸಹದೇವ ನಡಗೇರಿ,ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಬಸವರಾಜ ಕಡ್ಲೆಣ್ಣವರ,ತಿಮ್ಮನಗೌಡರ ಗೆಣಕಿಹಾಳ,ಸಿ ಎಸ್ ಪಾಟೀಲ,ರಮೇಶ ಹಂಚಿನಮನಿ,ಅರವಿಂದ ಕುಲಕರ್ಣಿ, ಮಧುಕುಮಾರ ಹರಿಜನ,ನಾಗರಾಜಗೌಡ ಸೊರಬ, ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪಿರೋಜಿ ಶಿಂಧೆ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಜಾನಪದ ಕಲಾವಿದ ರಾಮು ಮೂಲಗಿ,ಮಂಜುನಾಥ ಮುರಳ್ಳಿ,ಐ ಸಿ ಗೋಕುಲ,ಬಸವರಾಜ ದೊಡ್ಡಮನಿ,ಜಿ ವಿ ಹಿರೇಮಠ,ವಿಬಿ ಕುಬಸದ,ಫಕ್ಕಿರೇಶಕೊಂಡಾಯಿ,ಲಿಂಗರಡ್ಡಿ ನಡುವಿನಮನಿ,ನಿಂಗಪ್ಪ ಸುತಗಟ್ಟಿ,ಬಿ ವಾಯ್ ಪಾಟೀಲ,ರವಿ ತೋಟಗಂಟಿ ಉಪಸ್ಥಿತರಿದ್ದರು.
Kshetra Samachara
14/02/2021 04:53 pm