ಹುಬ್ಬಳ್ಳಿ: ಪರಸ್ಪರ ಆಪಾದನೆ ಮಾಡುವುದನ್ನ ಬಿಟ್ಟು , ಮಠದ ಬಗ್ಗೆ ವಿಚಾರ ಮಾಡೋಣ.ದಿಂಗಾಲೇಶ್ವರ ಶ್ರಿಗಳ ಬಗ್ಗೆ ನಾ ಏನೂ ಮಾತನಾಡುವುದಿಲ್ಲಾ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು,ಬಹಿರಂಗ ಚರ್ಚೆ ಮಾಡಿ ಮಠದ ಮರ್ಯಾದೆ ಇನ್ನೂ ನಾವು ತೆಗೆಯುತ್ತಿದ್ದೇವೆ.ಮೂರು ಸಾವಿರ ಮಠದ ವಿಚಾರವಾಗಿ ನಾನು ಬಹಿರಂಗ ಚರ್ಚೆ ಮಾಡಲು ನಾನು ಸಿದ್ದನಿಲ್ಲ.ಸುಮ್ಮನೆ ಆರೋಪ ಮಾಡಿದ್ರೆ, ನಾನು ಜವಾಬ್ದಾರನಲ್ಲ ಎಂದರು.
ಈ ಸಮಿತಿಯಲ್ಲಿ ಇನ್ನೂ ಹಿರಿಯರು ಇದ್ದಾರೆ ಅವರನ್ನು ಕೇಳಿ ಸಮಸ್ಯೆ ಇತ್ಯರ್ಥ ಮಾಡೋಣ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
Kshetra Samachara
07/02/2021 03:22 pm