ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಗ್ರಾಮ ಪಂಚಾಯತದಲ್ಲೂ ರೆಸಾರ್ಟ್‌ ರಾಜಕಾರಣ

ವರದಿ: ಈರಣ್ಣ ವಾಲಿಕಾರ

ಹುಬ್ಬಳ್ಳಿ: ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದ ರೆಸಾರ್ಟ್‌ ರಾಜಕೀಯ, ಸರ್ಕಾರವನ್ನೇ ಬದಲಾಯಿಸಿತ್ತು. ವಿಧಾನ ಸಭೆಯ ಶಾಸಕರು, ವಿಧಾನ ಪರಿಷತ್ ಸದಸ್ಯರಿಗೆ ಸೀಮಿತವಾಗಿದ್ದ ರೆಸಾರ್ಟ್‌ ರಾಜಕಾರಣ, ಇಂದು ಗ್ರಾಮ ಪಂಚಾಯತ್ ಸದಸ್ಯರ ಮಟ್ಟಕ್ಕೂ ಬಂದು ನಿಂತಿದೆ. ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾದ ಬೆನ್ನಲ್ಲೇ, ಪಂಚಾಯತ್ ಗಳಲ್ಲಿ ರೆಸಾರ್ಟ್‌ ರಾಜಕೀಯ ಗರಿಗೆದರಿದೆ.

ಕಳೆದ ಕೆಲವು ದಿನಗಳ ಹಿಂದೆ ರಾಜ್ಯದಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದರು. ಅಲ್ಲದೇ ಗೆದ್ದ ಅಭ್ಯರ್ಥಿಗಳಿಗ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ‌. ಎಸ್,, ಧಾರವಾಡ ಜಿಲ್ಲೆಯ ಏಳು ತಾಲೂಕಿನಲ್ಲಿ ಗ್ರಾಮ ಪಂಚಾಯತ್ ನ ಮೊದಲ ಆವಧಿಗೆ ಜಿಲ್ಲಾಡಳಿತ ಮೀಸಲಾತಿ ಪ್ರಕಟಿಸಿದೆ. ಅಲ್ಲದೇ ಫೆಬ್ರವರಿ 5 ರೊಳಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಬೇಕು. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣಾ ಆಯೋಗ ಸೂಚನೆ ನೀಡಿದೆ. ಹೀಗಾಗಿ ಜಿಲ್ಲಾಡಳಿತ ಅಧಿಕಾರಿಗಳನ್ನು ನೇಮಕಗೊಳಿಸಿ, ಚುನಾವಣೆ ಪ್ರಕ್ರಿಯೆಗೆ ಸಕಲ ಸಿದ್ದತೆ ನಡೆಸಿದೆ. ಇದರ ನಡುವೆ ಅಧ್ಯಕ್ಷ , ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸಿರುವ ಸದಸ್ಯರು ತಮ್ಮ ಬೆಂಬಲಿತ ಸದಸ್ಯರೊಂದಿಗೆ ರೆಸಾರ್ಟ್‌ ರಾಜಕೀಯ ಆರಂಭಿಸಿದ್ದಾರೆ.

ಜಿಲ್ಲೆಯ ಏಳು ತಾಲೂಕಿನಲ್ಲಿಯೂ ರೆಸಾರ್ಟ್‌ ರಾಜಕೀಯ ಜೋರಾಗಿದೆ. ಹುಬ್ಬಳ್ಳಿ, ಧಾರವಾಡ, ಅಣ್ಣಿಗೇರಿ, ಕುಂದಗೋಳ, ಕಲಘಟಗಿ ಅಳ್ನಾವರ ಹಾಗೂ ನವಲಗುಂದ ತಾಲೂಕಿನ ಗ್ರಾಮಗಳಲ್ಲಿನ ಸದಸ್ಯರು, ತಮ್ಮ ಬೆಂಬಲಿತ ಸದಸ್ಯರೊಂದಿಗೆ ಗೋವಾ ಸೇರಿದಂತೆ ಐತಿಹಾಸಿಕ ಸ್ಥಳಗಳಿಗೆ ಪ್ರವಾಸ ಕೈಗೊಂಡಿದ್ದಾರೆ. ಕಳೆದ ಹಲವು ದಿನಗಳಿಂದ ಗ್ರಾಮಗಳಲ್ಲಿ ಗುಂಪು ಕಟ್ಟಿಕೊಂಡು ತಂಡೋಪತಂಡವಾಗಿ ಸದಸ್ಯರು ರೆಸಾರ್ಟ್‌ ರಾಜಕೀಯದಲ್ಲಿ ತೊಡಗಿದ್ದು, ಸದಸ್ಯರ ನಡೆಯ ವಿರುದ್ಧ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಂಚಾಯತ್ ಗಳಲ್ಲಿ ಗೆಲುವು ಸಾಧಿಸಿದ ಬಳಿಕ, ಗ್ರಾಮದ ಅಭಿವೃದ್ಧಿಗೆ ಸದಸ್ಯರು ಶ್ರಮಿಸಬೇಕಿತ್ತು. ಅಲ್ಲದೇ ಚುನಾವಣೆಯ ವೇಳೆ ನೀಡಿದ ಭರವಸೆಗಳನ್ನು ಈಡೇರಿಸುವ‌ ನಿಟ್ಟಿನಲ್ಲಿ ಕೆಲಸ ಮಾಡಬೇಕಿತ್ತು. ಆದ್ರೆ, ಅವೆಲ್ಲವನ್ನೂ ಗೆದ್ದ ಖುಷಿಯಲ್ಲಿ ಮರೆತಿರುವ ಸದಸ್ಯರು ಅಧಿಕಾರದ ಆಸೆಗಾಗಿ ರೆಸಾರ್ಟ್‌ ರಾಜಕಾರಣಕ್ಕೆ ಮುಂದಾಗಿದ್ದು ದುರ್ದೈವದ ಸಂಗತಿಯೇ ಸರಿ.....!

Edited By : Nagesh Gaonkar
Kshetra Samachara

Kshetra Samachara

30/01/2021 07:04 pm

Cinque Terre

86 K

Cinque Terre

11

ಸಂಬಂಧಿತ ಸುದ್ದಿ