ಕುಂದಗೋಳ : ತಾಲೂಕಿನ ಚಾಕಲಬ್ಬಿ ಗ್ರಾಮದಲ್ಲಿ ತಾಲೂಕಾ ಆಡಳಿತ, ತಾಲೂಕ ಪಂಚಾಯತ ಮತ್ತು ಸಮಾಜ ಕಲ್ಯಾಣ ಇಲಾಖೆ, ಕುಂದಗೋಳ ಇವರ ಸಂಯುಕ್ತ ಆಶ್ರಯದಲ್ಲಿ ಅನುಸೂಚಿತ ಜಾತಿ ಅನುಸೂಚಿತ ಪಂಗಡದವರ ಕಾಯ್ದೆ ಹಾಗೂ ಸೌಲಭ್ಯಗಳ ಕುರಿತು ಒಂದು ದಿನದ ವಿಶೇಷ ಕಾರ್ಯಾಗಾರ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಕುಂದಗೋಳ ತಾಲೂಕು ಹಶೀಲ್ದಾರ ಬಸವರಾಜ ಮೆಳವಂಕಿ ಅನುಸೂಚಿತ ಜಾತಿ ಪಂಗಡ ಏಳ್ಗೆ ಸರ್ಕಾರ ಜಾರಿಗೆ ತಂದಿರುವ ಸೌಲಭ್ಯ ಬಳಸಿಕೊಳ್ಳಿರಿ ಎಂದರು.
ಉಪನ್ಯಾಸಕ ಡಾ. ಅಂಬೇಡ್ಕರ್ ಸಮುದಾಯ ಪ್ರಗತಿ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಡಾ. ಲಕ್ಷ್ಮಣ.ಸಿ.ಬುಕ್ಕಾಯಿ ಆ 'ದೌರ್ಜನ್ಯ ಪ್ರತಿಬಂಧ ಅಧಿನಿಯಮ 1889 ಹಾಗೂ 2015 ಮತ್ತು ನಿಯಮಗಳು 1995 ಮತ್ತು ಪರಿಷ್ಕೃತ ನಿಯಮಗಳ 2016 ಎಸ್.ಸಿ.ಪಿ /ಟಿ.ಎಸ್.ಪಿ ಕಾಯ್ದೆ ಮತ್ತು ನಿಯಮಗಳು ಕುರಿತು ಉಪನ್ಯಾಸ ನೀಡಿದರು.
ಇನ್ನೋರ್ವ ಉಪನ್ಯಾಸಕರ ವಕೀಲರಾದ ಅಶೋಕ ಕ್ಯಾರಕಟ್ಟಿ ಆಗಮಿಸಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದವರು ಗ್ರಾಮ ಪಂಚಾಯಿತಿ ಮಟ್ಟದಿಂದ ಹಿಡಿದು ರಾಷ್ಟ್ರ ಮಟ್ಟದವರೆಗೂ ಪಡೆಯಬಹುದಾದ ಸೌಲಭ್ಯಗಳ ಕುರಿತು ಅರಿವು ಮೂಡಿಸಿದರು.
ಯುವ ಜನ ಸಾಂಸ್ಕೃತಿಕ ಅಭಿವೃದ್ಧಿ ಕೇಂದ್ರ ಹರ್ಲಾಪುರ ಇವರಿಂದ ಬೀದಿ ನಾಟಕ ಪ್ರದರ್ಶನಗೊಂಡು ಹಳ್ಳಿಗರಲ್ಲಿ ವಿಶೇಷ ಜಾಗೃತಿ ನೀಡಿತು. ಇದೇ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಅಧೀನದಲ್ಲಿ ಸಮಾಜ ಕಲ್ಯಾಣ ಇಲಾಖೆ ಕುಂದಗೋಳ ಪ್ರಸ್ತುತ ಪಡಿಸಿರುವ ಪರಿಶಿಷ್ಟ ಜಾತಿ ಪಂಗಡದ ಅಭಿವೃದ್ಧಿಯ "ಜ್ಞಾನ ಸಿಂಧು" ಪುಸ್ತಕ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಚಾಕಲಬ್ಬಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸದಸ್ಯರು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಗ್ರಾಮದ ಸಾರ್ವಜನಿಕರು ಉಪಸ್ಥಿತರಿದ್ದರು.
Kshetra Samachara
29/01/2021 09:00 pm