ನವಲಗುಂದ : ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಗಳಿಗೆ ಫೆಬ್ರವರಿ 10 ರಂದು ಚುನಾವಣೆ ನಡೆಯಲಿದ್ದು, ಇಂದು ನಾಮಪತ್ರ ಸ್ವೀಕೃತಿ ಪ್ರಕ್ರಿಯೆ ಜರುಗಿತು.
ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಾಮಪತ್ರ ಸ್ವೀಕೃತಿ ಪ್ರಕ್ರಿಯೆ ಇಂದು ಸಹ ಮುಂದುವರೆದಿದ್ದು, ಜನವರಿ 25 ರಿಂದ ಫೆಬ್ರವರಿ 2 ರ ವರೆಗೆ ನಾಮಪತ್ರ ಸ್ವೀಕೃತಿ ನಡೆಯಲಿದೆ. ಫೆಬ್ರವರಿ 2 ರಂದು ನಾಮಪತ್ರ ಪರಿಶೀಲನೆ ಹಾಗೂ 4 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 1 ಕ್ಷೇತ್ರದ 11 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಅವುಗಳಲ್ಲಿ ಸ್ಥಾನ ಸಾಮಾನ್ಯ , ಪಜಾ , ಪಪಂ , ಹಿಂದುಳಿದ ಆ ವರ್ಗ, ಹಿಂದುಳಿದ ಬ ವರ್ಗ ಇವುಗಳಿಗೆ ತಲಾ ಒಂದೊಂದು ಸ್ಥಾನಗಳು ಮೀಸಲಿದ್ದು , ಮಹಿಳೆಯರಿಗೆ 2 ಸ್ಥಾನಗಳು ಮೀಸಲಿವೆ ಎಂದು ರಿಟರ್ನಿಂಗ್ ಅಧಿಕಾರಿ ಎಸ್.ಎಸ್ . ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
28/01/2021 04:02 pm