ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜ.16ರಂದು ಹುಬ್ಬಳ್ಳಿ ತಾಲೂಕಿನ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ನಿಗದಿ ಸಭೆ

ಹುಬ್ಬಳ್ಳಿ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ನೇತೃತ್ವದಲ್ಲಿ ಜ.16 (ಶನಿವಾರ)ದಂದು, ಹುಬ್ಬಳ್ಳಿಯ ನ್ಯೂ ಕಾಟನ್ ಮಾರುಕಟ್ಟೆಯ ಸಾಂಸ್ಕೃತಿಕ ಭವನದಲ್ಲಿ ಹುಬ್ಬಳ್ಳಿ ತಾಲೂಕಿನ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಸಭೆ ಜರುಗಲಿದೆ.

ತಾಲೂಕಿನ 26‌ ಗ್ರಾಮ ಪಂಚಾಯತಿ ಸದಸ್ಯರ ಆಯ್ಕೆಗೆ ದಿನಾಂಕ 27-12-2020ರಂದು ಮತದಾನ ಜರುಗಿತ್ತು. ದಿನಾಂಕ 30-12-2020ರಂದು ಮತ ಎಣಿಕೆ ಮುಗಿದು, ವಿಜೇತ ಅಭ್ಯರ್ಥಿಗಳನ್ನು ಘೋಷಿಸಲಾಗಿತ್ತು. ರಾಜ್ಯ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ವಯ ಜಿಲ್ಲಾಧಿಕಾರಿಗಳು ನೂತನ ಸದಸ್ಯ ಸಮ್ಮುಖದಲ್ಲಿ ಸಭೆ ಜರುಗಿಸಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮಿಸಲಾತಿಗಳನ್ನು ಪ್ರಕಟಿಸಲಿದ್ದಾರೆ.

Edited By : Vijay Kumar
Kshetra Samachara

Kshetra Samachara

15/01/2021 08:40 pm

Cinque Terre

16.29 K

Cinque Terre

0

ಸಂಬಂಧಿತ ಸುದ್ದಿ