ಹುಬ್ಬಳ್ಳಿ: ಬಿಎಸ್ ವೈ ಸಿಎಂ ಸ್ಥಾನದಿಂದ ಕೇಳಗಿಳಿಯೋದು ಪಕ್ಕಾ. ಬಿಜೆಪಿಯವರು ಅವಧಿ ಪೂರ್ಣಗೊಳಿಸುತ್ತೆ, ಮಧ್ಯಂತರ ಚುನಾವಣೆ ಆಗೋಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.
ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಸಿಎಂ ಬದಲಾವಣೆ ಆಗುತ್ತೆ,ಆದ್ರೆ ಅದು ಯಾವಾಗ ಆಗುತ್ತೆ ಗೊತ್ತಿಲ್ಲ. ಸಿಎಂ ಬಿಎಸ್ ವೈ ಯವರೇ ಪೂರ್ಣಾವಧಿ ಸಿಎಂ ಎಂಬ ಅರುಣ್ ಸಿಂಗ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಮತ್ತೆ ಅವರು ತೆಗೆದುಹಾಕ್ತಿವಿ ಅಂತ ಹೇಳೋಕೆ ಆಗುತ್ತಾ..?ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.
ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ನಾವೇ ಹೆಚ್ಚು ಸ್ಥಾನ ಗೆದ್ದಿದ್ದೇವೆ ಹಳೇ ಮೈಸೂರು, ರಾಜ್ಯದಲ್ಲಿ ನಾವೇ ನಂಬರ್-1 ಎಂದು ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿಯವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ.ಎನ್ ಡಿಎ ಜೊತೆ ಹೆಚ್ ಡಿಕೆ ಮೈತ್ರಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಜೆಡಿಎಸ್ ನವರ ಬಗ್ಗೆ ನಾನು ಮಾತನಾಡಲ್ಲ ಎಂದರು.
ಮೀಸಲಾತಿ ಕೇಳೋದು ತಪ್ಪಲ್ಲ.
ನಾನು ಸಿಎಂ ಆಗಿದ್ದ ನಾಲ್ಕು ಸಮುದಾಯವನ್ನು ಶಿಫಾರಸ್ಸು ಮಾಡಿದ್ದೆ. ಕೇಂದ್ರದಿಂದ ಇಲ್ಲಿಯವರೆಗೂ ಉತ್ತರ ಬಂದಿಲ್ಲಾ. ಇದನ್ನ ಈಶ್ವರಪ್ಪ ಸಧ್ಯ ಕೇಂದ್ರ ಸರ್ಕಾರವನ್ನ ಕೇಳಲಿ. ಕುರುಬ ಸಮುದಾಯವನ್ನು ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಇದು ಆರ್ ಎಸ್ ಎಸ್ ಹಾಗೂ ಈಶ್ವರಪ್ಪ ಕುತಂತ್ರ. ಬಿಜೆಪಿಯ ಸರ್ಕಾರವಿದೆ ಈಶ್ವರಪ್ಪ ಹೋರಾಟ ಮಾಡೋದು ಬಿಟ್ಟು ಮೀಸಲಾತಿ ಕೊಡಿಸಲಿ ಎಂದು ಸವಾಲು ಹಾಕಿದರು.
ಕೊರೊನಾ ವ್ಯಾಕ್ಸಿನ್ ಎಲ್ಲರೂ ತೊಗೋಬೇಕು. ಆದ್ರೆ ಅದು ಸೈಂಟಿಪಿಂಕ್ ಆಗಿ ಪ್ರೂವ್ ಆಗಬೇಕು. ಅದು 80 ಪರ್ಸೆಂಟ್ ಗಿಂತ ಜಾಸ್ತಿ ಏಪೆಕ್ಟ್ ಇರಬೇಕು. ಆ ಬಗ್ಗೆ ನಾನು ರೀಯಾಕ್ಟ್ ಮಾಡೋಕೆ ಎಕ್ಸಪರ್ಟ್ ಅಲ್ಲ.
ಆ ಬಗ್ಗೆ ತಿಳಿದುಕೊಂಡು ಮಾತನಾಡುತ್ತೇನೆ ಎಂದರು.
Kshetra Samachara
03/01/2021 09:42 pm