ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ರಾತ್ರಿಯಾದರೂ ನಡೆಯುತ್ತಿರುವ ಮತ ಎಣಿಕೆ

ಧಾರವಾಡ: ಧಾರವಾಡ ಜಿಲ್ಲೆಯ 144 ಗ್ರಾಮ ಪಂಚಾಯ್ತಿಗಳ ಪೈಕಿ 136 ಗ್ರಾಮ ಪಂಚಾಯ್ತಿಗಳಿಗೆ ಎರಡು ಹಂತಗಳಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಕಾರ್ಯ ಇನ್ನೂ ನಡೆಯುತ್ತಿದ್ದು, ತಡರಾತ್ರಿವರೆಗೂ ಮತ ಎಣಿಕೆ ನಡೆಯುವ ಸಾಧ್ಯತೆ ಇದೆ. ಸಂಜೆ 5 ಗಂಟೆಯವರೆಗೆ 670 ಮತಕ್ಷೇತ್ರಗಳಿಗೆ 1952 ಸ್ಥಾನಗಳಿವೆ. ಅವುಗಳಲ್ಲಿ 89 ಸ್ಥಾನಗಳಿಗೆ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 1863 ಸ್ಥಾನಗಳ ನೂತನ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆಗಳು ನಡೆದಿದ್ದವು.

ಧಾರವಾಡ ತಾಲೂಕಿನ 34 ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 185 ಮತಕ್ಷೇತ್ರಗಳಿದ್ದು, 533 ಸ್ಥಾನಗಳಿವೆ. ಇದರಲ್ಲಿ 30 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಜೆ 5 ಗಂಟೆಯವರೆಗೆ 46 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿವೆ.

ಅಳ್ನಾವರ ತಾಲೂಕಿನ 4 ಗ್ರಾಮ ಪಂಚಾಯತಿಗಳ 16 ಮತಕ್ಷೇತ್ರಗಳಿಗೆ 47 ಸ್ಥಾನಗಳಿವೆ. ಓರ್ವ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಜೆ 5 ಗಂಟೆಯವರೆಗೆ 8 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿವೆ.

ಕಲಘಟಗಿ ತಾಲೂಕಿನ 27 ಗ್ರಾಮ ಪಂಚಾಯ್ತಿಗಳ 127 ಮತಕ್ಷೇತ್ರಗಳಿಗೆ 340 ಸ್ಥಾನಗಳಿವೆ. 17 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಜೆ 5 ಗಂಟೆಯವರೆಗೆ 59 ಕ್ಷೇತ್ರಗಳ ಫಲಿತಾಂಶ ಹಾಗೂ 3 ಗ್ರಾಮ ಪಂಚಾಯ್ತಿಗಳ ಸಂಪೂರ್ಣ ಫಲಿತಾಂಶ ಪ್ರಕಟವಾಗಿವೆ.

ಹುಬ್ಬಳ್ಳಿ ತಾಲೂಕಿನ 26 ಗ್ರಾಮ ಪಂಚಾಯ್ತಿಗಳ 123 ಮತಕ್ಷೇತ್ರಗಳಿಗೆ 359 ಸ್ಥಾನಗಳಿವೆ. 24 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಜೆ 5 ಗಂಟೆಯವರೆಗೆ 32 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿವೆ.

ಕುಂದಗೋಳ ತಾಲೂಕಿನ 23 ಗ್ರಾಮ ಪಂಚಾಯ್ತಿಗಳ 117 ಮತಕ್ಷೇತ್ರಗಳಿಗೆ 346 ಸ್ಥಾನಗಳಿವೆ. 21 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಜೆ 5 ಗಂಟೆಯವರೆಗೆ 33 ಕ್ಷೇತ್ರಗಳು ಹಾಗೂ 4 ಗ್ರಾಮ ಪಂಚಾಯ್ತಿಗಳ ಸಂಪೂರ್ಣ ಫಲಿತಾಂಶ ಪ್ರಕಟವಾಗಿವೆ.

ನವಲಗುಂದ ತಾಲೂಕಿನ 14 ಗ್ರಾಮ ಪಂಚಾಯ್ತಿಗಳ 67 ಮತಕ್ಷೇತ್ರಗಳಿಗೆ 204 ಸ್ಥಾನಗಳಿವೆ. 19 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಜೆ 5 ಗಂಟೆಯವರೆಗೆ 28 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿವೆ.

ಅಣ್ಣಿಗೇರಿ ತಾಲೂಕಿನ 8 ಗ್ರಾಮ ಪಂಚಾಯ್ತಿಗಳ 35 ಮತಕ್ಷೇತ್ರಗಳಿಗೆ 109 ಸ್ಥಾನಗಳಿವೆ. 4 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಜೆ 5 ಗಂಟೆಯವರೆಗೆ 14 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿವೆ.

ಧಾರವಾಡ ತಾಲೂಕಿನ ವಿವಿಧ ಗ್ರಾಮ ಪಂಚಾಯ್ತಿಗಳಿಗೆ ನಡೆದ ಚುನಾವಣಾ ಮತ ಎಣಿಕೆ ಬಾಸೆಲ್ ಮಿಶನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯುತ್ತಿದ್ದು, ಅಭ್ಯರ್ಥಿಯ ಬೆಂಬಲಿಗರು ಅಲ್ಲಿ ದೊಡ್ಡ ಮಟ್ಟದಲ್ಲಿ ಜಮಾವಣೆಗೊಂಡಿದ್ದರು. ಗೆದ್ದ ತಮ್ಮ ಅಭ್ಯರ್ಥಿಗೆ ಬಣ್ಣ ಎರಚಿ, ಮಾಲೆ ಹಾಕಿ ಸಂಭ್ರಮಿಸಿದರು.

Edited By : Nagesh Gaonkar
Kshetra Samachara

Kshetra Samachara

30/12/2020 10:28 pm

Cinque Terre

90.33 K

Cinque Terre

2

ಸಂಬಂಧಿತ ಸುದ್ದಿ