ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಪೆಟ್ಟಿಗೆಯಲ್ಲಿ ಭದ್ರವಾದ ಅಭ್ಯರ್ಥಿಗಳ ಭವಿಷ್ಯ ಮತದಾರ ನಿರಾಳ

ಕುಂದಗೋಳ : ತಾಲೂಕಿನ 23 ಗ್ರಾಮ ಪಂಚಾಯಿತಿಗಳ 157 ಮತಗಟ್ಟೆಗಳ ಚುನಾವಣೆ ಮುಕ್ತಾಯಗೊಂಡಿದೆ. ಬ್ಯಾಲೆಟ್ ಪೇಪರ್ ಹಾಳೆಯಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದ್ದು

ಈಗಾಗಲೇ ಎಲ್ಲ ಗ್ರಾಮಗಳ ಮತದಾರರು ಸೇರಿದಂತೆ ಅಭ್ಯರ್ಥಿಗಳ ಚಿತ್ತ ಡಿ.30 ರಂದು ಹೊರ ಬೀಳುವ ಫಲಿತಾಂಶದತ್ತ ಕೇಂದ್ರಿಕೃತವಾಗಿದೆ.

ಇಂದು ಬೆಳಿಗ್ಗೆ 7 ಗಂಟೆಯಿಂದಲೇ ಆರಂಭವಾದ ಚುನಾವಣೆಗೆ ವೃದ್ಧರು, ಅಂಗವಿಕಲರು ಸೇರಿದಂತೆ ಮಹಿಳೆಯರು ಅತಿ ಹೆಚ್ಚಿನ ಉತ್ಸಾಹದೊಂದಿಗೆ ಮತ ಚಲಾಯಿಸಿದ್ದಾರೆ.

ಇನ್ನು ಗ್ರಾಮದ ವಿದ್ಯಾವಂತ ಯುವಕ ನಾಗರೀಕರು ಈ ಬಾರಿ ಅರ್ಹರನ್ನೇ ಚುನಾಯಿಸಲು ತಮ್ಮ ಹಕ್ಕನ್ನು ನೀಡಿದ್ದಾರೆ.

ತಾಲೂಕಿನಲ್ಲಿ ಗುರುತಿಸಲಾಗಿದ್ದ 33 ಸೂಕ್ಷ್ಮ ಅತಿ ಸೂಕ್ಷ್ಮ 25 ಸಾಮಾನ್ಯ 99 ಸಾಮಾನ್ಯ ಮತಗಟ್ಟೇಗಳಲ್ಲಿ ಕೋವಿಡ್ ನಿಯಮಾನುಸಾರ ಸರಳ ಮತದಾನ ಪ್ರಕ್ರಿಯೆ ನಡೆದಿದ್ದು

ಮಾಜಿ ಶಾಸಕರಾದ ಎಮ್.ಎಸ್.ಅಕ್ಕಿ, ಎಸ್.ಐ‌‌.ಚಿಕ್ಕನಗೌಡರ, ಸೇರಿದಂತೆ ಶಾಸಕಿ ಕುಸುಮಾವತಿ ಶಿವಳ್ಳಿ ಸಹ ಮತ ಚಲಾಯಿಸಿ ಗ್ರಾಮದ ಜನರಿಗೆ ತಮ್ಮ ಹಕ್ಕು ಚಲಾಯಿಸಲು ಪ್ರೇರೆಪಿಸಿದ್ದಾರೆ.

ಉಳಿದಂತೆ ನಿನ್ನೆ ಕತ್ತಲ ರಾತ್ರಿ ಜೋರಾಗಿಯೆ ನಡೆದರೂ ಮತದಾರ ಮಾತ್ರ ಮಧ್ಯಾಹ್ನದ ನಂತರದಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾಯಿಸಿ ನಿರಾಳರಾದರೇ ಅಭ್ಯರ್ಥಿಗಳ ಮನಸ್ಸಿನಲ್ಲಿ ತೋಳಲಾಟ ಹೆಚ್ಚಿದೆ.

ಒಟ್ಟಾರೆ ಚುನಾವಣೆಗಾಗಿ ನೇಮಿಸಿದ 628 ಸಿಬ್ಬಂದಿ 1081 ಅಭ್ಯರ್ಥಿಗಳ ಮತದಾನವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ತಾಲೂಕಿನನಲ್ಲಿ 1 ಡಿವೈಎಸ್ಪಿ, 4 ಸಿಪಿಐ, 25 ಎಎಸ್ಐ, 250 ಪೊಲೀಸ್ ಸಿಬ್ಬಂದಿ ಸೇರಿದಂತೆ 5 ಡಿಆರ್.

ಕೆಎಸ್ಆರ್ಪಿ ಸೂಕ್ತ ಬಂದೋಬಸ್ತ್ ಒದಗಿಸಿ ಗಲಾಟೆಗಳಿಲ್ಲದೆ ಚುನಾವಣೆಯನ್ನು ಸರಳವಾಗಿ ಮುಕ್ತಾಯದ ಹಂತ ತಲುಪಿಸಿದ್ದು ಕುಂದಗೋಳ ತಾಲೂಕಿನಲ್ಲಿ ಶೇ.80 % ಮತದಾನವಾಗಿದೆ.

Edited By : Manjunath H D
Kshetra Samachara

Kshetra Samachara

27/12/2020 07:55 pm

Cinque Terre

38.29 K

Cinque Terre

0

ಸಂಬಂಧಿತ ಸುದ್ದಿ