ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : 23 ಗ್ರಾಪಂ ಮತದಾನ ಕೋವಿಡ್ ನಿಯಮಾನುಸಾರ ಸರಳ

ಕುಂದಗೋಳ : ಜಿಲ್ಲೆಯಲ್ಲಿ 2ನೇ ಹಂತದ ಮತದಾನ ಆರಂಭ ಪ್ರಕ್ರಿಯೆ 7 ಗಂಟೆಯಿಂದಲೇ ಆರಂಭವಾಗಿದ್ದರೂ ಚಳಿ ಕಾರಣ ಮತಗಟ್ಟೆಗಳ ಸುಳಿಯುವ ಮತದಾರರ ಸಂಖ್ಯೆ ನಿರಾಯಾಸವಾಗಿತ್ತು, ಬಳಿಕ ಬಿಸಿಲೇರಿದಂತೆ ಒಬ್ಬೋಬ್ಬರಾಗಿ ಗ್ರಾಮಗಳ ಮತಗಟ್ಟೆಗಳಿಗೆ ಆಗಮಿಸಿ ತಮ್ಮ ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದು ಈ ಬಾರಿಯ ಪಂಚಾಯಿತಿ ಕಣದಲ್ಲಿ ಹಣ ಹೆಂಡದ ಆಮಿಷದ ಬದಲಾಗಿ ಯೋಗ್ಯರನ್ನೇ ಆಯ್ಕೆ ಮಾಡುವ ನಿರ್ಧಾರಕ್ಕೆ ಮತದಾರರ ಸನ್ನದ್ಧರಾಗಿದ್ದಾರೆ.

ಈಗಾಗಲೇ ಕುಂದಗೋಳ ತಾಲೂಕಿನ 23 ಗ್ರಾಮ ಪಂಚಾಯಿತಿಗಳ ಮತಗಟ್ಟೆಗಳಲ್ಲಿ ಮತದಾರರಿಗೆ ಮಾಸ್ಕ್ ನೀಡಿ, ಥರ್ಮಲ್ ಸ್ಕ್ಯಾನಿಂಗ್ ಮಾಡಿ, ಸಾಮಾಜಿಕ ಅಂತರದ ಜೊತೆಗೆ ಮತ ಚಲಾಯಿಸಲು ಮತಗಟ್ಟೆ ಒಳಗೆ ಬಿಡುತ್ತಿದ್ದು, ಮತಗಟ್ಟೆ ಸುತ್ತ 100 ಮೀಟರ್ ವ್ಯಾಪ್ತಿಯಲ್ಲಿ ಸಾರ್ವಜನಿಕ ಸಂಚಾರಕ್ಕೆ ನಿಷೇಧ ಹೇರಲಾಗಿದೆ.

ವೃದ್ಧರು, ಅಂಗವಿಕಲರಿಗೆ ಮತದಾನ ಚಲಾಯಿಸಲು ಗ್ರಾಮ ಪಂಚಾಯಿತಿ ಅಭ್ಯರ್ಥಿಗಳು ವಾಹನ ಸೌಕರ್ಯ ನೀಡಿದರೇ, ಕೆಲವರು ಸಾಮಾನ್ಯರು ಮತದಾರರು ಅಂಗವಿಕಲರಿಗೆ ಆಸರೆಯಾಗಿರುವ ದೃಶ್ಯ ಕಂಡು ಬಂದವು, ಒಟ್ಟಾರೆ ಮತದಾನ ಎಲ್ಲೇಡೆ ಶಾಂತವಾಗಿ ನಡೆಯುತ್ತಿದೆ.

Edited By : Manjunath H D
Kshetra Samachara

Kshetra Samachara

27/12/2020 12:16 pm

Cinque Terre

36.29 K

Cinque Terre

0

ಸಂಬಂಧಿತ ಸುದ್ದಿ