ಹುಬ್ಬಳ್ಳಿ: ಕೆಪಿವೈಸಿ ಸಾಂಸ್ಥಿಕ ಚುನಾವಣೆ ಈ ಬಾರಿ ಆನ್‌ಲೈನ್‌ನಲ್ಲಿ ನಡೆಯಲಿದೆ. ನಿವೃತ್ತ ಮುಖ್ಯ ಚುನಾವಣಾ ಆಯುಕ್ತ ಜೆ.ಎಂ. ಲಿಂಗ್ಡೋ ಅವರ ನೇತೃತ್ವದ ಫೌಂಡೇಷನ್ ಫಾರ್ ಅಡ್ವಾನ್ಸ್ಡ್ ಮ್ಯಾನೇಜ್‌ಮೆಂಟ್ ಆಫ್ ಎಲೆಕ್ಷನ್ ಸಂಸ್ಥೆಯು ಚುನಾವಣಾ ಪ್ರಕ್ರಿಯೆಯನ್ನು ನಡೆಸಲಿದೆ. ಕೆಪಿವೈಸಿ ರಾಜ್ಯ ಘಟಕ, ಜಿಲ್ಲಾ ಘಟಕ ಹಾಗೂ ಬ್ಲಾಕ್ ಪದಾಧಿಕಾರಿಗಳ ಆಯ್ಕೆ ನಡೆಯಲಿದೆ.
‘ಕೋವಿಡ್ ಕಾರಣ ಆನ್‌ಲೈನ್ ಚುನಾವಣೆ ನಡೆಸಲಾಗುತ್ತಿದೆ. ಕೆಪಿವೈಸಿ ಸದಸ್ಯರೆಲ್ಲರೂ ಮತದಾನಕ್ಕೆ ಅರ್ಹರು. ಚುನಾವಣೆ ದಿನ ಅವರ ಮೊಬೈಲ್ ಫೋನ್‌ಗೆ ಒಟಿಪಿ ಕಳಿಸಲಾಗುತ್ತದೆ. ಇದನ್ನು ಬಳಸಿ ಅವರು ಮತ ಚಲಾಯಿಸಬಹುದು‘ ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ‘ಪ್ರಜಾವಾಣಿ’ಗೆ ತಿಳಿಸಿದರು.
’ಮತದಾನದ ವೇಳೆ ಸೆಲ್ಫಿ ಕಳುಹಿಸುವುದು ಕಡ್ಡಾಯ. ಆದ್ದರಿಂದ ಯಾರದ್ದೋ ಮೊಬೈಲ್ ಫೋನ್, ಒಟಿಪಿ ಬಳಸಿ ಇನ್ಯಾರೋ ಮತ ಚಲಾಯಿಸಲಾಗದು’ ಎಂದು ಮಾಹಿತಿ ನೀಡಿದರು.
Kshetra Samachara
27/12/2020 09:40 am