ಧಾರವಾಡ: ಯಡಿಯೂರಪ್ಪ ಲಿಂಗಾಯತ ಸಮಾಜದ ಪ್ರಶ್ನಾತೀತ ನಾಯಕ ಆಗಿ ಬಿಂಬಿಸಿಕೊಂಡಿದ್ದಾರೆ, ಅಲ್ಲದೇ ಅವರ ಮೇಲೆ ಪಂಚಮಸಾಲಿ ಋಣಭಾರ ಬಹಳ ಇದೆ,
ಹಾಗಾಗಿ ಮುಖ್ಯಂಮತ್ರಿ ಯಡಿಯೂರಪ್ಪನವರು ಪಂಚಮಸಾಲಿ ಸಮಾಜಕ್ಕೆ 2 ಮೀಸಲಾತಿಯನ್ನು ಅವರ ಅವಧಿಯಲ್ಲೇ ಕೊಡಬೇಕು ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದ್ದಾರೆ.
ಧಾರವಾಡದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಅಗ್ರಹಿಸಿ ವೀರಪ್ಪ ಮೊಯ್ಲಿ ಅವರ ಕಾಲದಿಂದ ಹಿಡಿದು,
ಇಂದಿನ ಮುಖ್ಯಮಂತ್ರಿಯವರೆಗೂ ಶಾಲು ಹೊದಿಸಿ ಸನ್ಮಾನಿಸಿ ಕೇಳಿಕೊಂಡಿದ್ದು ಸಾಕಾಗಿದೆ. ಹಾಗಾಗಿ ಈಗ ಹೋರಾಟ ಮಾಡುವುದು ಅನಿವಾರ್ಹವಾಗಿದೆ ಎಂದರು.
ನಮ್ಮ ಸಮಾಜದ ಸಂಘಟನೆ ಆರಂಭವಾಗಿ 20 ವರ್ಷ ಆಯ್ತು, ಸಮಾಜದ ಮಕ್ಕಳಿಗೆ ಶಿಕ್ಷಣ ಮತ್ತು ಯುವಕರಿಗೆ ಉದ್ಯೋಗಕ್ಕಾಗಿ ಸಂಘಟನೆ ಆರಂಭವಾಗಿದೆ,
ಅದಕ್ಕೆ ಬೇಕಾದ 2ಎ ಮೀಸಲಾತಿಗಾಗಿ ಹೋರಾಟ ಈಗ ತೀವ್ರಗೊಂಡಿದ್ದು, ಹೋರಾಟ ಮಾಡುತ್ತಿದ್ದೇವೆ. ಸ್ವಾತಂತ್ರ್ಯ ಬಂದಾಗಿನಿಂದ 8 ಜನ ಲಿಂಗಾಯತ ಸಿಎಂ ರಾಜ್ಯವಾಳಿದ್ದಾರೆ.
ಆದರೆ ರಾಜಕೀಯ ಜಾಗೃತಿಗೆ ಮಾತ್ರ ಲಿಂಗಾಯತ ಸಮುದಾಯ ಬಳಕೆಯಾಗಿದೆ, ಈ ಎಲ್ಲ 8 ಜನ ಸಿಎಂಗಳಿಗೂ ಮೀಸಲಾತಿಗೆ ಸುವರ್ಣ ಅವಕಾಶ ಇತ್ತು. ಆದರೆ ಯಾರೊಬ್ಬರೂ ಅದನ್ನು ಈಡೇರಿಸುವ ಮನಸ್ಸು ಮಾಡಲಿಲ್ಲ ಎಂದು ಅಸಮಾಧಾನ ಹೋರಹಾಕಿದರು.
ಕೂಡಲೇ ಪಂಚಮಸಾಲಿ ಮೀಸಲಾತಿಯ ಕುರಿತು ರಾಜ್ಯದ ಮುಖ್ಯಮಂತ್ರಿಗಳಿಗೆ ಆರ್.ಎಸ್.ಎಸ್ ಸಹ ಇದನ್ನು ಮನವರಿಕೆ ಮಾಡಿಕೊಡಬೇಕು,
ಕರ್ನಾಟಕದಲ್ಲಿ ಬಿಜೆಪಿ ಬರಲು ಲಿಂಗಾಯತರ ಪಾತ್ರ ಬಹಳ ಇದೆ. ಹಾಗಾಗಿ ಲಿಂಗಾಯತ ಸಮಾಜದ ಪ್ರಮುಖ ಬೇಡಿಕೆ ಈಡೇರಿಕೆಗೆ ಸಂಘ ಪರಿವಾರವು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈ ಕುರಿತು ಕೂಡಸಂಗಮದಿಂದ ಜ.14 ರಿಂದ ಬೆಂಗಳೂರಿನ ವಿಧಾನಸೌಧದವರೆಗೂ ಪಾದಯಾತ್ರೆ ನಡೆಸಿ, ಮುತ್ತಿಗೆ ಹಾಕಲಾಗುವುದು ಎಂದರು.
Kshetra Samachara
26/12/2020 12:47 pm