ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಿಎಂ ಮನೆಯತ್ತ ಹೋರಾಟಗಾರರ ಚಿತ್ತ; ಬೇಕೆ ಬೇಕು ನ್ಯಾಯ ಬೇಕು...!

ಹುಬ್ಬಳ್ಳಿ: ಸಿಎಂ ಬಸವರಾಜ ಬೊಮ್ಮಾಯಿಯವರ ಕ್ಷೇತ್ರ ಶಿಗ್ಗಾಂವ್ ನಲ್ಲಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಹೋರಾಟ ಸಾಕಷ್ಟು ತೀವ್ರತೆಯನ್ನು ಪಡೆದುಕೊಂಡಿದ್ದು, ಸವಣೂರು ರಸ್ತೆಯಲ್ಲಿನ ಸಿಎಂ ಬಸವರಾಜ ಬೊಮ್ಮಾಯಿ‌ ‌ಮನೆಗೆ ಮುತ್ತಿಗೆ ಹಾಕಲು ಸಮುದಾಯದ ಮುಖಂಡರು ಆಗಮಿಸುತ್ತಿದ್ದಾರೆ.

ಹೌದು... ಈಗಾಗಲೇ ಸಿಎಂ ನಿವಾಸದೆದುರು ಧರಣಿ ಸತ್ಯಾಗ್ರಹ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಒಂದು ಕಡೆ ಸಿಎಂ ನಿವಾಸಕ್ಕೆ ಬಿಗಿ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ. ಆದರೆ ರಸ್ತೆ ಮಧ್ಯದಲ್ಲಿ ವೇದಿಕೆಯಲ್ಲಿ ಕುಳಿತು ಪ್ರತಿಭಟನೆ ಮಾಡಲು ಅವಕಾಶ ಮಾಡಿಕೊಟ್ಟಿದೆ.

ಇನ್ನೂ ಶಿಗ್ಗಾಂವ್-ಸವಣೂರ ನಡುವೆ ರಸ್ತೆ ಸಂಪರ್ಕ ಸಂಪೂರ್ಣ ಬಂದ್ ಆಗಿದ್ದು, ಬೇರೆ ಮಾರ್ಗದ ಸೂಚನೆ ನೀಡಲಾಗಿದೆ. ಕೆಲವು ಕ್ಷಣಗಳಲ್ಲಿ ಹೋರಾಟದ ಸ್ವರೂಪ ಬದಲಾಗಿದೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

20/09/2022 03:37 pm

Cinque Terre

35.29 K

Cinque Terre

0

ಸಂಬಂಧಿತ ಸುದ್ದಿ