ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಈದ್ಗಾ ಗಣೇಶೋತ್ಸವದ ವೇಳೆ ಎಸ್.ಎಸ್.ಕೆ. ಸಮಾಜದ ನಿರ್ಲಕ್ಷ್ಯ: ಸಾಮಾಜಿಕ ಜಾಲತಾಣದಲ್ಲಿ ಅತೃಪ್ತಿ ಸಂದೇಶ ವೈರಲ್

ಹುಬ್ಬಳ್ಳಿ: ಸಾಕಷ್ಟು ವಿವಾದಗಳನ್ನು ಹುಟ್ಟು ಹಾಕಿದ್ದ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಸುಖಾಂತ್ಯ ಕಂಡಿದೆ ಎನ್ನುವಷ್ಟರಲ್ಲಿ ಮತ್ತೊಂದು ಚರ್ಚೆ ಮುನ್ನಲೆಗೆ ಬಂದಿದೆ.

ಹೌದು.. ಹುಬ್ಬಳ್ಳಿಯ ಈದ್ಗಾ ಗಣೇಶೋತ್ಸವ ಸಾವಜಿ ಸಮಾಜದ ಮುಖಂಡರಲ್ಲಿ ಅಸಮಾಧಾನ ಹುಟ್ಟು ಹಾಕಿದ್ದು, ಹೋರಾಟ ಮಾಡಿದವರು ಒಬ್ಬರು, ಅವಕಾಶ ಕೊಟ್ಟಿದ್ದು ಮತ್ತೊಬ್ಬರಿಗೆ ಅಂತ ಅತೃಪ್ತಿ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಳೆದ 10 ವರ್ಷಗಳಿಂದಲೂ ಈದ್ಗಾ ಗಣೇಶ ಪ್ರತಿಷ್ಠಾಪನೆಗೆ ಹೋರಾಟ ನಡೆದಿತ್ತು. ಎಸ್.ಎಸ್.ಕೆ ಸಮಾಜದ ಮುಖಂಡ ಹನುಮಂತಸಾ ನಿರಂಜನ್ ಹೋರಾಟಕ್ಕೆ ಎಂಟ್ರಿ ಕೊಟ್ಟ ನಂತರ ಯಶಸ್ಸು ಸಿಕ್ಕಿದೆ. ಆದರೆ ನಿರಂತರ ಹೋರಾಟ ಮಾಡಿದ್ದ ಹನುಮಂತಸಾ ನಿರಂಜನ್ ಅವರನ್ನು ಉತ್ಸವದ ವೇಳೆ ಸಂಪೂರ್ಣ ಕಡೆಗಣನೆ ಮಾಡಿರೋ ಆರೋಪ ಕೇಳಿ ಬಂದಿದೆ.

ಇನ್ನೂ ಇತರೆ ಸಂಘಟನೆಯನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಅಂತ ಆರೋಪ ಕೇಳಿ ಬಂದಿದ್ದು, ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕ್ರಮವಾಗಿ ರೂಪುಗೊಂಡಿತೆಂದು ಕಿಡಿ ಕಾರಿದ್ದಾರೆ. ಅಲ್ಲದೇ ಪೋಸ್ಟರ್ ಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ ಎಸ್.ಎಸ್.ಕೆ ಸಮಾಜದ ಮುಖಂಡರು, ಬಹಿರಂಗ ಅತೃಪ್ತಿಯನ್ನು ವ್ಯಕ್ತಪಡಿಸಿದ್ದಾರೆ. ಈ ರೀತಿ ಮಾಡಿರೋದು ಸರಿಯಲ್ಲ ಅಂತ ಕಿಡಿ ಕಾರಿದ್ದಾರೆ. ಗಣೇಶೋತ್ಸವಕ್ಕೆ ಅವಕಾಶ ಸಿಕ್ಕಿದೆ ಅಂತ ಸುಮ್ಮನಿದ್ದೇವೆ ಎಂದಿರೋ ಮುಖಂಡರು, ಬಿಜೆಪಿ ಮುಖಂಡರು ಇದನ್ನು ಅರ್ಥಮಾಡಿಕೊಂಡು ಮುನ್ನಡೆಯಬೇಕೆಂದು ಆಗ್ರಹಿಸಿದ್ದಾರೆ.‌ ಈ ಬೆಳವಣಿಗೆ ಮುಂದಿನ ದಿನಗಳಲ್ಲಿ ಬಿಜೆಪಿಗೆ ಅಡ್ಡಪರಿಣಾಮವಾಗೋ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.

Edited By : Manjunath H D
Kshetra Samachara

Kshetra Samachara

03/09/2022 12:29 pm

Cinque Terre

50.05 K

Cinque Terre

46

ಸಂಬಂಧಿತ ಸುದ್ದಿ