ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಪ್ರಮೋದ್ ಮುತಾಲಿಕ್ ನನ್ನು ಬಂಧಿಸುವಂತೆ ರಸ್ತೆಗಿಳಿದ ದಲಿತರು

ಹುಬ್ಬಳ್ಳಿ : ಪ್ರಮೋದ್ ಮುತಾಲಿಕ್ ಒಂದೇ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಮಾತನಾಡುತ್ತಿದ್ದಾರೆ. ಮುಸ್ಲಿಂ ಸಮಾಜದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಮುತಾಲಿಕ್ ಮಸೀದಿಗೆ ಮುತ್ತಿಗೆ ಹಾಕುತ್ತೇನೆ ಎನ್ನಲು ಈತ ಯಾರು...? ಧರ್ಮ ಧರ್ಮದ ವಿರುದ್ಧ ಜಗಳ ಹಚ್ಚುತ್ತಿದ್ದಾನೆ ಎಂದು ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಮರಾಜ್ಯ ಅಂದರೆ ಇದೇನಾ..? ಬಡವರ ಮೇಲೆ ಗಲಾಟೆ ಮಾಡುವುದು ರಾಮ ಸೇನೆ ಕೆಲಸವಾ..? ಸಂವಿಧಾನ ರಕ್ಷಣೆಗಾಗಿ ಪ್ರಮೋದ್ ಮುತಾಲಿಕ್ ನನ್ನು ಬಂಧಿಸುವಂತೆ ಜೈ ಭೀಮ್ ಸಂಘಟನೆಯಿಂದ ಹುಬ್ಬಳ್ಳಿ ತಹಶೀಲ್ದಾರ್ ಕಚೇರಿ ಮುಂಭಾಗ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.

ಮುತಾಲಿಕ್ ಅವರು ಎಲ್ಲಾ ವಿಷಯದಲ್ಲಿ ಧರ್ಮ ಎಳೆ ತರುವುದು ಸರಿಯಲ್ಲ. ದೇಶದ್ರೋಹ ಕಾನೂನು ಅಡಿಯಲ್ಲಿ ಬಂಧಿಸುವಂತೆ ಆಗ್ರಹಿಸಿದರು. ಸಂವಿಧಾನ ವಿರೋಧಿ ಕಾರ್ಯಕ್ಕೆ ಸರ್ಕಾರ ಬೆಂಬಲ ನೀಡುತ್ತಿದೆ. ಹಾಗಾಗಿ ಮುತಾಲಿಕ್ ಅವರನ್ನು ಬಂಧಿಸಿ ,ಗಡಿಪಾರು ಮಾಡುವಂತೆ ತಹಶೀಲ್ದಾರ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಿದರು.

Edited By : Shivu K
Kshetra Samachara

Kshetra Samachara

18/05/2022 05:35 pm

Cinque Terre

22.43 K

Cinque Terre

18

ಸಂಬಂಧಿತ ಸುದ್ದಿ