ಧಾರವಾಡ: ಸಮಾಜದಲ್ಲಿ ಸದ್ಯ ಅಶಾಂತಿ ಸೃಷ್ಠಿಯಾಗಿರುವ ಸಂಬಂಧ ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದಾರೆ.
ಧಾರವಾಡದಲ್ಲಿ ಮಾತನಾಡಿರುವ ಅವರು, ಎಲ್ಲರೂ ಸಾಮರಸ್ಯದಿಂದ ಇರಬೇಕು. ಮಠ, ಮಾನ್ಯಗಳು ಇದನ್ನೇ ಹೇಳುತ್ತಿವೆ. ಎಲ್ಲದಕ್ಕೂ ಒಂದು ಪರಿಹಾರ ಸಿಕ್ಕೇ ಸಿಗುತ್ತದೆ. ನಾಲ್ಕೈದು ದಿವಸ ಈ ಅಶಾಂತಿ ವಾತಾವರಣ ಇರಬಹುದು. ಮುಂದೆ ಎಲ್ಲವೂ ಸರಿ ಹೋಗುತ್ತದೆ ಎಂದಿದ್ದಾರೆ.
ಕಾನೂನು ಎಲ್ಲರಿಗೂ ಒಂದೇ. ಈ ದೇಶದ ಕಾನೂನನ್ನು ಎಲ್ಲರೂ ಪಾಲಿಸಬೇಕು. ಕಾನೂನು ಪಾಲಿಸಿದರೆ ಎಲ್ಲವೂ ಸರಿಯಾಗಿ ನಡೆಯುತ್ತದೆ ಎಂದಿದ್ದಾರೆ.
Kshetra Samachara
06/04/2022 08:03 am