ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಗಟ್ಸ್ ಇದ್ದರೆ ಜಿ.ಪರಮೇಶ್ವರ ಅವರನ್ನು ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಲಿ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷಕ್ಕೆ ಸವಾಲ್ ಹಾಕಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ಇಲ್ಲಿಯವರೆಗೆ ದಲಿತ ಮುಖ್ಯಮಂತ್ರಿ ಮಾಡಿದ್ದಾರೆಯೇ? ದಲಿತರ ಬಗ್ಗೆ ಕಾಳಜಿ ಇದ್ದರೆ ತಕ್ಷಣ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾಂಗ್ರೆಸ್‌ನ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಜಿ.ಪರಮೇಶ್ವರ ಎಂದು ಹೇಳಿಕೆ ಕೊಡಲಿ. ಅದು ಬಿಟ್ಟು ದಲಿತರ ಹೆಸರಿನಲ್ಲಿ ಕಣ್ಣು ಒರೆಸುವ ತಂತ್ರ ಬೇಡಾ ಎಂದು ಹರಿಹಾಯ್ದರು.
ಇತ್ತೀಚಿನ ದಿನಗಳಲ್ಲಿ ಸೆಕ್ಯೂಲರ್ ಪದವನ್ನು ಬಳಕೆ ಮಾಡಿ ಮಾಡಿ ಅದರ ಮಹತ್ವವನ್ನೇ ಕಳೆದುಕೊಂಡಿದೆ. ಸಿದ್ದರಾಮಯ್ಯ ಅಲ್ಪಸಂಖ್ಯಾತರನ್ನು ಫೀಸ್ ಮಾಡಿ ಮಾಡಿ ಅದರ ಅರ್ಥವನ್ನೇ ಕಳೆದಿದ್ದಾರೆ. ಸೆಕ್ಯೂಲರ್ ಬಗ್ಗೆ ಅಲ್ಪಸಂಖ್ಯಾತರು ಮಾತನಾಡಿದರೇ ಅದು ಸೆಕ್ಯೂಲರ್, ಹಿಂದೂಗಳು ಮಾತನಾಡಿದರೇ ಅದು ಕೋಮುವಾದವಂತೆ, ಈ ಕಾರಣದಿಂದಲೇ ಕಾಂಗ್ರೆಸ್ ಗೆ ಹಲವಾರು ರಾಜ್ಯಗಳಲ್ಲಿ ಜನರು ಪಾಠ ಕಲಿಸಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲೂ ಪಾಠ ಕಲಿಸುವುದು ಉಳಿದಿದೆ. ಸೆಕ್ಯೂಲರ್ ಪದವನ್ನು ಯಾರು ಹೆಚ್ಚು ಬಳಸತ್ತಾರೆ ಅವರೇ ಪ್ರತಿನಿತ್ಯ ಜಾತಿ ರಾಜಕಾರಣ ಮಾಡುತ್ತಾ ಇದ್ದಾರೆ ಎಂದು ಗುಡುಗಿದರು.
ಕುಮಾರಸ್ವಾಮಿ ಅವರು ಯಾವಾಗ ಕಾಂಗ್ರೆಸ್‌ನೊಂದಿಗೆ ಒಂದಾಗುತ್ತಾರೆ. ಯಾವಾಗ ಮುಳುಗಡೆ ಆಗುತ್ತಾರೆ ಗೊತ್ತಾಗುವುದಿಲ್ಲ. ಈ ಹಿಂದೆ ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ನೀಡಿದರು. ಆಮೇಲೆ ಅವರನ್ನು ಕಾಲು ಹಿಡಿದು ಜಗ್ಗಿದ್ದರು. ಇದೀಗ ಕಾಂಗ್ರೆಸ್ ಜೊತೆಗೆ ಕೈಜೋಡಿಸತ್ತಾ ಇದ್ದಾರೆ. ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
08/06/2022 01:39 pm