ಕುಂದಗೋಳ : ತಾಲೂಕಿನ 23 ಗ್ರಾಮ ಪಂಚಾಯಿತಿಗಳ ಚುನಾವಣೆಯ ಮೊದಲ ಸುತ್ತಿನ ಮತ ಎಣಿಕೆ ಕಾರ್ಯ ಮುಕ್ತಾಯಗೊಂಡಿದೆ. ಎರಡನೇ ಹಂತದ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ಗುಡೇನಕಟ್ಟಿ, ಯರಗುಪ್ಪಿ, ಹಿರೇಹರಕುಣಿ, ಗುಡಗೇರಿ, ಸಂಶಿ, ಪಂಚಾಯಿತಿಗಳ ಅಭ್ಯರ್ಥಿ / ಪೊಲೀಂಗ್ ಎಜೇಂಟರ್'ಗಳು ಕೊಠಡಿಗೆ ಧಾವಿಸುತ್ತಿದ್ದಾರೆ.
ಮತ ಎಣಿಕೆ ಕೊಠಡಿಗಳಿಗೆ ಆಗಮಿಸುವ ಪೊಲೀಂಗ್ ಎಜೇಂಟರ್'ಗಳಲ್ಲಿ ಕೆಲ ಅಭ್ಯರ್ಥಿಗಳು ಮೂಡನಂಬಿಕೆ ಮೋರೆ ಹೋಗಿ ಜೇಬಿನಲ್ಲಿ ನಿಂಬೆಹಣ್ಣು, ದೇವರ ಅಂಗಾರ, ಇಟ್ಟುಕೊಂಡು ಮತ ಎಣಿಕೆ ಕೊಠಡಿಗೆ ಆಗಮಿಸುವ ಮುನ್ನ ಪೊಲೀಸರ್ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಕೆಲವರಂತು ಐದು ನಿಂಬೆಹಣ್ಣನ್ನು ಜೇಬಿನಲ್ಲಿ ಇಟ್ಟುಕೊಂಡು ಬಂದಿದ್ದು ಆಶ್ಚರ್ಯ ಉಂಟುಮಾಡಿತು.
ಇನ್ನು ಮೊದಲು ಸುತ್ತಿನ ಮತ ಎಣಿಕೆಗೆ ಆಗಮಿಸಿದ ಕೆಲ ಜನರು ಊಟದ ವಿಚಾರವಾಗಿ ತಾಲೂಕು ಆಡಳಿತದ ಸಿಬ್ಬಂದಿಗಳ ಜೊತೆ ಮಾತಿನ ಚಕಮಕಿ ನಡೆಸಿದರು, ಈ ವೇಳೆ ಸಮಸ್ಯೆ ತಿಳಿಗೊಳಿಸಿದ ಅಧಿಕಾರಿಗಳು ಸಾರ್ವಜನಿಕರನ್ನು ಸಮಾಧಾನ ಪಡಿಸಿದರು.
Kshetra Samachara
30/12/2020 05:33 pm