ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಅರ್ಧ ಜ್ಞಾನದ ಜ್ಞಾನೇಂದ್ರರವರೇ ರಾಜೀನಾಮೆ ಕೊಡಿ; ಚಿಂಚೋರೆ ಒತ್ತಾಯ

ಧಾರವಾಡ: ಕೊಡಗಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಸಿಸಿ ಸದಸ್ಯ ದೀಪಕ ಚಿಂಚೋರೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಧಾರವಾಡದಲ್ಲಿ ಮಾತನಾಡಿದ ಅವರು, ಈ ರಾಜ್ಯದ ಗೃಹ ಮಂತ್ರಿ ಅರಗ ಜ್ಞಾನೇಂದ್ರ ಅವರಿಗೆ ಅರ್ಧ ಜ್ಞಾನ ಇದೆ. ಅವರಿಗೆ ಗೃಹ ಸಚಿವರಾಗಲು ಅರ್ಹತೆ ಇಲ್ಲ. ಕೂಡಲೇ ಅವರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ದೀಪಕ ಚಿಂಚೋರೆ ಒತ್ತಾಯಿಸಿದರು.

ಆಗಸ್ಟ್ 26 ರಂದು ಎಲ್ಲ ಕಾಂಗ್ರೆಸ್ ಕಾರ್ಯಕರ್ತರು ಸೇರಿ ಕೊಡಗು ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಒಬ್ಬ ಮಾಜಿ ಸಿಎಂ ಅವರಿಗೆ ರಕ್ಷಣೆ ಕೊಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.

Edited By : Somashekar
Kshetra Samachara

Kshetra Samachara

19/08/2022 03:45 pm

Cinque Terre

30.99 K

Cinque Terre

5

ಸಂಬಂಧಿತ ಸುದ್ದಿ