ಕಲಘಟಗಿ:ಮಾಜಿ ಸಚಿವ ಸಂತೋಷ ಲಾಡ್ ರಾಜ್ಯ ಹಾಗೂ ಕೇಂದ್ರ ಸರಕಾರಗಳ ರೈತ ವಿರೋಧಿ ಕಾಯ್ದೆಗಳ ವಿರುದ್ಧ ಪ್ರತಿಭಟಿಸಿ ರಾಷ್ಟ್ರಪತಿಗಳಿಗೆ ತಹಶೀಲ್ದಾರ ಮೂಲಕ ಮನವಿಯನ್ನು ಸಲ್ಲಿಸಿದರು.
ಪಟ್ಟಣದಲ್ಲಿ ಹನುಮಾನ ದೇವಸ್ಥಾನದಿಂದ ತಹಶೀಲ್ದಾರ ಕಚೇರಿಗೆ ಕಾರ್ಯಕರ್ತರೊಂದಿಗೆ ಹೆಜ್ಜೆ ಹಾಕಿದ ಲಾಡ್ ಭೂ ಸುಧಾರಣಾ,ಎಪಿಎಂಸಿ ಕಾಯ್ದೆಗಳನ್ನು ತಂದ ಬಿಜೆಪಿ ಸರಕಾರಗಳ ಧೋರಣೆಯನ್ನು ಖಂಡಿಸಿ ತಹಶೀಲ್ದಾರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು ಹಾಗೂ ತಾಲೂಕಿನ ಅತಿಯಾದ ಮಳೆಯಿಂದ ಬಿದ್ದ ಮನೆಗಳಿಗೆ,ಬೆಳೆ ಹಾಳಾಗಿದ್ದು ರೈತರಿಗೆ ಪರಿಹಾರ ಹಾಗೂ ಬೆಳೆ ವಿಮೆ ನೀಡುವಂತೆ ಲಾಡ್ ಸರಕಾರವನ್ನು ಒತ್ತಾಯಿಸಿದರು.
Kshetra Samachara
03/10/2020 03:42 pm