ಹುಬ್ಬಳ್ಳಿ : ಹುಬ್ಬಳ್ಳಿ ರೈಲ್ವೆ ವರ್ಕ್ ಶಾಪ್ ನಲ್ಲಿ ಗುತ್ತಿಗೆ ಪೌರ ಕಾರ್ಮಿಕರ ಕೆಲಸಕ್ಕೆ ಕುತ್ತು ಬಂದಿದೆ. ಸುಮಾರು 15 ವರ್ಷದಿಂದ ಪೌರ ಕಾರ್ಮಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದ 41 ಜನ ಕಾರ್ಮಿಕರು ಇದೀಗ ಕಳೆದ ಒಂದು ವಾರದಿಂದ ಕೆಲಸ ಇಲ್ಲದೆ ಗೇಟ್ ಕಾಯುತ್ತಿದ್ದಾರೆ ಇದಕ್ಕೆ ಕಾರಣ ಏನಪ್ಪ ಅಂದ್ರೆ ಇತ್ತೀಚಿಗೆ ಹೊಸ ಗುತ್ತಿಗೆ ಪಡೆದಿರುವ ಕಂಪನಿ ನಿರ್ಧಾರ.
ಎಸ್ ಇತ್ತೀಚಿಗೆ ಕಿಂಗ್ಸ್ ಸೆಕ್ಯುರಿಟಿ ಎನ್ನುವ ಸಂಸ್ಥೆಗೆ ಮಾನವ ಸಂಪನ್ಮೂಲ ಒದಗಿಸುವ ಕೆಲಸ ದೊರೆತಿದೆ. ಇದಾದ ನಂತರ ಇಲ್ಲಿರುವ ಸೂಪರ್ ವೈಸರ್ ಹಾಗೂ ಮಾಲೀಕ ತಮ್ಮನ್ನು ಕೆಲಸದಿಂದ ತೆಗೆದಿದ್ದಾರೆ ಅಂತ ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.
ಈ ಬಗ್ಗೆ ಗುತ್ತಿಗೆ ಸಂಸ್ಥೆಯನ್ನು ಸಂಪರ್ಕಿಸಿದಾಗ ಹೊಸ ಗುತ್ತಿಗೆ ಸ್ವಲ್ಪ ಹಳಬರಿಗೆ ಕೆಲಸ ಕೊಟ್ಟಿದ್ದು ಮೊದಲಿನ ಕಾರ್ಮಿಕರನ್ನು ಮುಂದುವರೆಸಲು ಸಾದ್ಯವಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಇನ್ನು 15 ವರ್ಷದಿಂದ ಪೌರ ಕಾರ್ಮಿಕರಾಗಿ ನಾವು ದುಡಿದಿದ್ದೇವೆ ಈಗ ಕೆಲಸ ಕಳೆದುಕೊಂಡರೆ ಹೇಗೆ ಎಂದೂ ಕಾರ್ಮಿಕರು ಪ್ರಶ್ನಿಸುತ್ತಿದ್ದಾರೆ. ಸದ್ಯ ಕಾರ್ಮಿಕರು ಹಾಗೂ ಗುತ್ತಿಗೆದಾರನ ಮಧ್ಯೆ ಸಂಘರ್ಷ ಮುಂದುವರೆದಿದ್ದು ಕಾರ್ಮಿಕರು ಮಾಲೀಕರ ವಿರುದ್ಧ ಪೊಲೀಸ್ ದೂರು ನೀಡುವುದಾಗಿ ತಿಳಿಸಿದ್ದಾರೆ.
ಏನೇ ಆಗಲಿ ಹಲವು ವರ್ಷಗಳಿಂದ ಒಂದೇ ಸಂಸ್ಥೆಯಲ್ಲಿ ದುಡಿದ ಶ್ರಮಿಕ ವರ್ಗಕ್ಕೆ ಮತ್ತೆ ಅವರ ಉದ್ಯೋಗ ದೊರೆತು ಎಲ್ಲವೂ ತಿಳಿಯಾಗಲಿ ಎನ್ನುವುದೂ ನಮ್ಮ ಆಶಯ.
Kshetra Samachara
04/07/2022 07:55 pm