ಹುಬ್ಬಳ್ಳಿ: ಅದು ಮಾಜಿ ಸಿಎಂ ಅವರು ಪ್ರತಿನಿಧಿಸುವ ನಗರ. ಆದರೆ ಈ ನಗರದ ಅವ್ಯವಸ್ಥೆ ನೋಡಿದರೇ ನಿಜಕ್ಕೂ ಬೇಸರ ಮೂಡುತ್ತದೆ. ಇಲ್ಲಿ ಸಂಚಾರ ಮಾಡಬೇಕು ಅಂದರೆ ನಿಜಕ್ಕೂ ಕೈಯಲ್ಲಿ ಜೀವ ಹಿಡಿದುಕೊಂಡು ಓಡಾಡುವಂತಾಗಿದೆ. ಈಗ ಸಾರ್ವಜನಿಕರು ಶಾಸಕರನ್ನು ಎಚ್ಚರಿಸಲು ವಿನೂತನ ಕಾರ್ಯವನ್ನು ಕೈಗೆತ್ತಿಕೊಂಡು ರಸ್ತೆ ಸುಧಾರಣೆ ಮಾಡುವಂತೆ ಆಗ್ರಹಿಸಿದ್ದಾರೆ. ಹಾಗಿದ್ದರೇ ಯಾವುದು ಆ ನಗರ? ಅಲ್ಲಿನ ಸಮಸ್ಯೆ ಆದರೂ ಏನು ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್..
ಕೇಶ್ವಾಪುರ ನಗರದಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ ದುರಸ್ತಿಯ ಕಾರ್ಯವನ್ನು ಮಾಡುವಂತೆ ಆಗ್ರಹಿಸಿ ಕೇಶ್ವಾಪುರ ನಿವಾಸಿಗಳು ರಸ್ತೆಯಲ್ಲಿ ರಂಗೋಲಿ ಬಿಡಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು. ಕೇಶ್ವಾಪುರದ ಎರಡನೇ ಅಡ್ಡರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ವಯೋವೃದ್ಧರು, ಶಾಲಾ ಮಕ್ಕಳಿಗೆ ದಿನನಿತ್ಯ ಸಂಚರಿಸಲು ತೊಂದರೆಯಾಗುತ್ತಿದ್ದು ಕೂಡಲೇ ರಸ್ತೆ ದುರಸ್ತಿ ಮಾಡುವಂತೆ ಆಗ್ರಹಿಸಿ ರಸ್ತೆಯಲ್ಲಿ ರಂಗೋಲಿ ಬಿಡಿಸುವ ಮೂಲಕ ಕೇಶ್ವಾಪುರ ನಿವಾಸಿಗಳು ವಿನೂತನವಾಗಿ ಪ್ರತಿಭಟನೆ ನಡೆಸಿದ್ರು. ಇಲ್ಲಿನ ಶಾಸಕರಾದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ಹಾಗೂ ಗಟಾರ ನಿರ್ಮಾಣ ಮಾಡುವಂತೆ ಶಾಸಕರಿಗೆ ಹಲವು ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ . ಆದ್ದರಿಂದ ಇಂದು ನಗರದಲ್ಲಿ ಗುಂಡಿ ಬಿದ್ದ ರಸ್ತೆಯಲ್ಲಿ ರಂಗೋಲಿ ಬಿಡಿಸುವ ಮೂಲಕ ಪ್ರತಿಭಟನೆ ಮಾಡಿದ್ದೇವೆ . ಇನ್ನಾದರೂ ಶಾಸಕರು ಎಚ್ಚೆತ್ತುಕೊಂಡು ಕೂಡಲೇ ರಸ್ತೆ ದುರಸ್ತಿ ಕಾಮಗಾರಿಯನ್ನು ಮಾಡಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು .
ಇನ್ನೂ ಪ್ರತಿಭಟನೆಗೆ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ಸಾಥ್ ನೀಡಿದ್ದು, ಇಲ್ಲಿನ ಸಮಸ್ಯೆಗಳಿಗೆ ಶಾಸಕರು ಸ್ಪಂದಿಸುವ ಕಾರ್ಯವನ್ನು ಮಾಡಬೇಕಿದೆ ಎಂದು ಆಗ್ರಹಿಸಿದ್ದಾರೆ. ಅಲ್ಲದೇ ಇಲ್ಲಿನ ಜನರು ದಿನಕ್ಕೊಂದು ಸಮಸ್ಯೆಗೆ ಸಿಲುಕಿಕೊಂಡು ಜೀವನ ನಡೆಸುವಂತಾಗಿದ್ದು, ಮಾಜಿ ಸಿಎಂ ಪ್ರತಿನಿಧಿಸುವ ಪ್ರದೇಶದಲ್ಲಿಯೇ ಈ ರೀತಿ ಆದರೆ ಹೇಗೆ ಎಂಬುವಂತ ಪ್ರಶ್ನೆ ಉದ್ಬವಿಸುತ್ತಿದೆ ಎಂದರು.
ಒಟ್ಟಿನಲ್ಲಿ ಸಾರ್ವಜನಿಕರು ತಮ್ಮ ತಮ್ಮ ಹಕ್ಕನ್ನು ಪಡೆದುಕೊಳ್ಳಲು ಹೋರಾಟ ಮಾಡುವುದು ಅನಿವಾರ್ಯವಾಗಿದ್ದು, ಇನ್ನಾದರೂ ಶಾಸಕರು ಹಾಗೂ ಸ್ಥಳೀಯ ಆಡಳಿತ ಮಂಡಳಿ ಸೂಕ್ತ ಪರಿಹಾರ ಒದಗಿಸುವ ಕಾರ್ಯವನ್ನು ಮಾಡಬೇಕಿದೆ.
Kshetra Samachara
27/04/2022 04:20 pm