ಹುಬ್ಬಳ್ಳಿ: ಏ....ಏ... ಏನಿದು ಭೂಮಿ ಬಾಯಿ ತೆರೆಯುವ ರೀತಿ ಭೂಕಂಪನ ಆಯಿತೆ. ಇಲ್ಲವೇ.... ಯಾವ ಯಾವುದೋ ಶತ್ರು ರಾಷ್ಟ್ರದವರು ಬಾಂಬ್ ದಾಳಿ ಯಿಂದ ರಸ್ತೆಗಳು ಈ ರೀತಿ ಆಗಿವೇಯೋ......
ಮತದಾರ ಮಹಾ ಪ್ರಭುಗಳೇ ಇದ್ಯಾವುದು ಅಲ್ಲ.... ಇಲ್ಲಿ ನಮ್ಮ ಮಹಾನಾಯಕರು ಹಾಗೂ ಅಧಿಕಾರಿಗಳ ಭ್ರಷ್ಟಾಚಾರದ ದಾಹ ತೀರಿಸಿಕೊಳ್ಳಲು ಒಳ್ಳೆಯ ಗಟ್ಟಿ ರಸ್ತೆಯನ್ನು JCB ಎಂಬ ದೊಡ್ಡ ಯಂತ್ರದ ಮೂಲಕ ಕಡೆಯಲಾಗಿದೆ.
ಏ.... ಏನ್ ಇವರ್ news ಹೇಳುದ್ ಬಿಟ್ಟ dialog ಹೊಡ್ಯಾಕತ್ತಾರ್ ಅನಬ್ಯಾಡ್ರೀ... ಪ್ಪಾ..... ಇದ್ ನಮ್ಮ so called ಜನ ಸೇವಕರು ಮಾಡಿರುವ super idea ..... ಇದು ದೇಶಪಾಂಡೆನಗರದ BJP ಆಫೀಸ್ ಮುಂದಿನ ರಸ್ತೆ....
First class ಇರುವ ರೋಡನ್ ಮತ್ತ್ ಹೆಡ್ಡಿ ತಗದ ರಿಪೇರಿ ಹೆಸರನ್ಯಾಗ್ ಮಂದಿ tax ರೊಕ್ಕಾ ಹೊಡೆಯುವ ಪಕ್ಕಾ planning ರೀ..... ಇದ್..... ಅಲ್ಲ್ರೀ....ಊರ ತುಂಬ ವರ್ಷಗಟ್ಟಲೆ ಆದ್ರೂ ರಸ್ತೆ ಹಳಾ ಹಿಡದ್ ಹೋಗ್ಯಾವ್ .... ಅವನ್ 1st ಮಾಡಿಸುದ್ ಬಿಟ್ಟ ಚೋಲೋ ಚಕ್ಕಾ....ಚಕ್ಕ ಇದ್ ರಸ್ತೆ ಮತ್ತ್ ಮಾಡಿಸುದ್ ವ್ಹಾ...ವ್ಹಾ...... ಕ್ಯಾ...ರೇ....ಆಡಳಿತ....
ಇದನ್ ನಾವ ಹೇಳಾಕುಂತಿಲ್ಲಾ.... ಇಲ್ಲಿ ಮಂದಿನ್ ಹೇಳತ್ತಾರ್ ಕೇಳ್ರೀ....
ಅಲ್ಲಾ ನೀವ ನಾವ್ ಎಷ್ಟ್ ಹೇಳಿದ್ರು.... ಇಂತಾ ಕೆಲಸಾ ಏನ್ ನಿಲ್ಲುದಿಲ್ಲ.... ಆದ್ರ ಮಂದಿಗೆ ತ್ರಾಸ್ ಕೊಟ್ಟ ಮಾಡಿದ್ರ ಹೇಗ್.... ಒಂದ್ ಸೈಡ್ ಅಡ್ಯಾಕ್ ಜಗಾ ಬಿಟ್ಟ ಮಾಡಿದ್ರ ಒಂದ್ ಲೇಕ್ .... ಹೀಗ್ ಎಲ್ಲಾ ರೋಡನ್ ಏರಾ ಬೇರಿ ಹಡ್ಡಿದ್ರ ... ಮಂದಿ ಬಾಳ್ಯೇ ಹೇಗ್...
ಒಟ್ಟನ್ಯಾಗ್ ಒಂದ್ ರೊಕ್ಕಾ ಹಾಳ ಮಾಡಾಕ್ ಪಕ್ಕಾ planning ಮಾಡಿ. ರೋಡನ್ ಕೆಡಿಸೇ....ಬಿಟ್ಟಿರೀ..... ಹೋಗ್ಲೀ... ಇದನರೇ ಜಲ್ದಿ... ಮಾಡ್ರೀ...ಪ್ಪಾ...... ಭ್ರಷ್ಟಾಸೂರರೇ.........
ಇಷ್ಟಲಿಂಗ ಪಾವಟೆ ಸ್ಪೆಷಲ್ ಬ್ಯುರೊ ಪಬ್ಲಿಕ್ ನೆಕ್ಸ್ಟ್.....
Kshetra Samachara
09/01/2022 11:28 am