ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಹೈವೆ ಜಾಮ್ ಮಾಡಿದ ಹೋರಾಟಗಾರರು

ಧಾರವಾಡ: ಇಟಿಗಟ್ಟಿ ಬಳಿಯ ರಾಷ್ಟ್ರೀಯ ಹೆದ್ದಾರಿಯನ್ನು ಅಗಲೀಕರಣ ಮಾಡಬೇಕು ಎಂದು ಒತ್ತಾಯಿಸಿ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್.ನೀರಕೇರಿ, ಜನಜಾಗೃತಿ ಸಂಘ, ಕೆಲಗೇರಿಯ ನಿವಾಸಿಗಳ ನೇತೃತ್ವದಲ್ಲಿ ನರೇಂದ್ರ ಟೋಲಗೇಟ್ ನಿಂದ ಇಟಿಗಟ್ಟಿ ಕ್ರಾಸ್ ವರೆಗೆ ಪಾದಯಾತ್ರೆ ನಡೆಸಲಾಯಿತು.

ಮೊನ್ನೆ ಇಟಿಗಟ್ಟಿ ಕ್ರಾಸ್ ಬಳಿ ನಡೆದ ಭೀಕರ ರಸ್ತೆ ಅಪಘಾತ ಧಾರವಾಡ ಕಂಡ ದೊಡ್ಡ ದುರಂತ. ಇದೇ ರೀತಿ ಈ ರಸ್ತೆಯಲ್ಲಿ ಅಪಘಾತಗಳು ನಡೆಯುತ್ತಲೇ ಇವೆ. ಅಶೋಕ ಖೇಣಿ ಅವರು 25 ವರ್ಷದಿಂದ ಈ ರಸ್ತೆ ನಿರ್ವಹಣೆ ಮಾಡುತ್ತಿದ್ದಾರೆ. ರಸ್ತೆ ಅಗಲೀಕರಣವಾಗದ ಹಿನ್ನೆಲೆಯಲ್ಲಿ ಅಪಘಾತ ನಡೆಯುತ್ತಲೇ ಇವೆ. ಕೂಡಲೇ ರಸ್ತೆ ಅಗಲೀಕರಣ ಮಾಡಬೇಕು ಎಂದು ಪಾದಯಾತ್ರೆ ನಡೆಸಲಾಯಿತು.

ಮಾರ್ಗ ಮಧ್ಯದಲ್ಲಿ ಹೋರಾಟಗಾರರು ಹೈವೆಯಲ್ಲೇ ಕುಳಿತು ಸರ್ಕಾರ ಹಾಗೂ ಅಶೋಕ ಖೇಣಿ ವಿರುದ್ಧ ಪ್ರತಿಭಟನೆ ನಡೆಸಿದರು. ಇದರಿಂದ ಹೈವೆಯಲ್ಲಿ ಜಾಮ್ ಉಂಟಾಗಿತ್ತು. ಸಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದ್ದರಿಂದ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು.

Edited By : Manjunath H D
Kshetra Samachara

Kshetra Samachara

18/01/2021 12:32 pm

Cinque Terre

41.72 K

Cinque Terre

19

ಸಂಬಂಧಿತ ಸುದ್ದಿ