ಧಾರವಾಡ: ಸತತ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಹಾನಿಗೊಳಗಾದ ಧಾರವಾಡದ ಕುಮಾರೇಶ್ವರ ನಗರದ ವಾರ್ಡ್ ನಂಬರ 1ರಲ್ಲಿರುವ ಅಳಗವಾಡಿ ಪ್ಲಾಟ್‌ಗೆ ಮೇಯರ್ ಈರೇಶ ಅಂಚಟಗೇರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೇಯರ್ ಭೇಟಿ ಸಂದರ್ಭದಲ್ಲಿಅಲ್ಲಿನ ಸಾರ್ವಜನಿಕರು ರಸ್ತೆ, ಬೀದಿದೀಪ ಹಾಗೂ ಸ್ವಚ್ಛತೆಯ ಸಮಸ್ಯೆಗಳ ಬಗ್ಗೆ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ಮೇಯರ್, ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ಅವರನ್ನು ಸ್ಥಳಕ್ಕೆ ಕರೆಯಿಸಿ ವಿಶೇಷ ಅನುದಾನದಲ್ಲಿ 20 ಲಕ್ಷಗಳನ್ನು ನೀಡಿ ಶೀಘ್ರವೇ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಹಾಗೂ ಈ ತರಹದ ಸಮಸ್ಯೆಗಳು ಮುಂದಿನ ದಿನಗಳಲ್ಲಿ ಮರುಕಳಿಸದಂತೆ ನೋಡಿಕೊಳ್ಳಲು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಅನಿತಾ ಚಳಗೇರಿ ಸಂಜಯ ಕಪಟಕರ, ಪಾಲಿಕೆಯ ವಲಯ ಸಹಾಯಕ ಆಯುಕ್ತರಾದ ಆರ್.ಎಂ. ಕುಲಕರ್ಣಿ, ಸಿ.ಆರ್. ಮೆಣಸಿನಕಾಯಿ ಸೇರಿದಂತೆ ಇತರರು ಇದ್ದರು.
Kshetra Samachara
07/09/2022 01:45 pm