ಹುಬ್ಬಳ್ಳಿ: ಪಶ್ಚಿಮ ಶಿಕ್ಷರ ಚುನಾವಣಾ ಅಭ್ಯರ್ಥಿ ಬಸವರಾಜ ಹೊರಟ್ಟಿ 8ನೇ ಬಾರಿ ಗೆಲುವು ಸಾಧಿಸುವ ಮೂಲಕ ದಾಖಲೆ ಬರೆದಿದ್ದಾರೆ. ಇವರ ಈ ದಾಖಲೆ ಗೆಲುವಿನ ಹಿಂದೆ ಅಂಬಾಸಿಡರ್ ಕಾರಿನ ಮೇಲೆ ಅವರು ಇಟ್ಟ ನಂಬಿಕೆಯೂ ಗೆದ್ದಿದೆ.
ಹೌದು...ಮತ್ತೊಮ್ಮೆ ಬಸವರಾಜ್ ಹೊರಟ್ಟಿ ಅದೃಷ್ಟವನ್ನು ಅವರ ನೆಚ್ಚಿನ ಅಂಬಾಸಿಡರ್ ಕಾರು ಸಾಬೀತು ಮಾಡಿದೆ. ಇದೇ ಅಂಬಾಸಿಡರ್‌ನಲ್ಲಿ ಬಂದು ಹೊರಟ್ಟಿ ಅವರು ನಾಮಪತ್ರ ಸಲ್ಲಿಸಿದ್ದರು. ಈ ಕಾರಿನೊಡನೆ ಭಾವನಾತ್ಮಕ ಸಂಬಂಧವನ್ನು ಹೊಂದಿದ ಹೊರಟ್ಟಿ ಅವರು ಈ ಕಾರ್ ಮೇಲೆ ಬಹಳ ಪ್ರೀತಿ ಇಟ್ಟುಕೊಂಡಿದ್ದಾರೆ.
ಪ್ರಥಮ ಚುನಾವಣೆಯಿಂದ ಈ ಚುನಾವಣೆವರೆಗೂ ಇದೇ ಕಾರನ್ನು ಹೊರಟ್ಟಿ ಅವರು ಉಪಯೋಗ ಮಾಡಿದ್ದಾರೆ. ಮೊದಲನೆಯ ಚುನಾವಣೆಯಿಂದ ಈ ಚುನಾವಣೆವರೆಗೂ ಇದೇ ಕಾರಿನಲ್ಲಿ ಬಂದು ನಾಮಪತ್ರ ಸಲ್ಲಿಸಿದ್ದಾರೆ. ಇದೇ ಕಾರಣಕ್ಕಾಗಿ ಬಸವರಾಜ ಹೊರಟ್ಟಿಯ ಈ ಕಾರು ಅದೃಷ್ಟದ ಕಾರಾಗಿದೆ.
ಈಗಾಗಲೇ ಇದು 8 ಲಕ್ಷ ಕಿಮೀ ಓಡಿರುವ ಕಾರು ಇದಾಗಿದ್ದು, ಎಲ್ಲರಿಗೂ 5757 ಅಂದರೆ ಪರಿಚಯ. ಈ ಕಾರಿನಲ್ಲಿ ಹೋದರೆ ಹೊರಟ್ಟಿ ಬಂದರು ಎನ್ನುತ್ತಾರೆ. ಕೇವಲ ಕುಟುಂಬಕ್ಕೆ ಹಾಗೂ ಹೊರಟ್ಟಿ ಅವರ ಮನೆಯ ಶುಭ ಕಾರ್ಯಕ್ಕೆ ಈ ಕಾರನ್ನು ಬಳಸಿಕೊಂಡು ಬಂದಿದ್ದಾರೆ.
Kshetra Samachara
15/06/2022 06:02 pm