ಕುಂದಗೋಳ : ಎತ್ತ ನೋಡಿದರತ್ತ ಜನಸಮೂಹ, ಎಲ್ಲೆಡೆ ಹಲಿಗೆ ಡೊಳ್ಳು ಕುಣಿತ, ಜಾನಪದ ಸೊಗಡು. ಅಗಲಿದ ನಾಯಕನ ಪುಣ್ಯಸ್ಮರಣೆಗೆ ಯರಗುಪ್ಪಿ ಗ್ರಾಮದಲ್ಲಿ ಆತನಿಲ್ಲ ಎಂದರೂ, ತಮ್ಮ ಅಭಿವೃದ್ಧಿ ಕೆಲಸದ ಮೂಲಕ ಮನೆ ಮಾತಾದ ಸಚಿವ ಚನ್ನಬಸಪ್ಪ ಸತ್ಯಪ್ಪ ಶಿವಳ್ಳಿ ಪ್ರೀತಿಗೆ ಹರ್ಷೋದ್ಗಾರದ ಸುರಿಮಳೆ.
ಹೌದು ! ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದ್ದ ಮಾಜಿ ಸಚಿವ ದಿ.ಸಿ.ಎಸ್.ಶಿವಳ್ಳಿಯವರ ಮೂರನೇ ಪುಣ್ಯಸ್ಮರಣೆಯಲ್ಲಿ ಒಂದೆಡೆ ಕಾಂಗ್ರೆಸ್ ನಾಯಕರ ದಂಡು, ಇನ್ನೊಂದೆಡೆ ಎಣಿಕೆಗೆ ಸಿಗದ ಅಭಿಮಾನಿಗಳು,
ಇವೆರಡೆರ ನಡುವೆ ಪತಿಯ ಮೇಲಿನ ಜನಾಭಿಮಾನ ನೋಡಿ ಆನಂದಭಾಷ್ಪ ಸುರಿಸಿದ ಶಾಸಕಿ ಕುಸುಮಾವತಿ ಶಿವಳ್ಳಿ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನ ಮನಗೆದ್ದ ದಿ.ಶಿವಳ್ಳಿ ಜನಪರ ಕೆಲಸಗಾರನಾಗಿ, ಸಚಿವ ಸ್ಥಾನ ಕೇಳದೆ ಪಡೆದವ, ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಮತಕ್ಷೇತ್ರದ ರೋಗಿಗಳ ಸಹಾಯಕ್ಕಾಗಿ ಒಬ್ಬ ಪಿಎ ನೇಮಿಸಿದವ, ಕಷ್ಟದಲ್ಲಿದ್ದವರಿಗೆ, ಬಡವರಿಗೆ, ದೀನ, ದಲಿತ ಮಧ್ಯಮ ವರ್ಗದವರಿಗೆ ಪರೋಪಕಾರಿಯಾಗಿ ನಿಂತವ ಎಂದು ಈ ಮಾತು ಹೇಳಿ ಶಿವಳ್ಳಿ ಅಭಿಮಾನವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತುಂಗಕ್ಕೆ ಏರಿಸಿದರು.
ಮೂರ್ತಿ ಅನಾವರಣಗೊಳಿಸಿದ ಸಿದ್ದರಾಮಯ್ಯ ಜಾತಿ ಮತ ಧರ್ಮ ನೋಡದೆ, ಅಧಿಕಾರ ಇದ್ದಾಗ ಇಲ್ಲದಿದ್ದಾಗ ಒಂದೇ ಮನಃಸ್ಥಿತಿ ಹೊಂದಿದ ಶಿವಳ್ಳಿ ಮೇಲೆ ಜನರಿಟ್ಟ ಪ್ರೀತಿ ಶಾಸಕಿ ಕುಸುಮಾವತಿ ಶಿವಳ್ಳಿ ಅಭಿವೃದ್ಧಿ ಕೆಲಸಕ್ಕೆ ಸಾಕ್ಷಿ ಎಂದರು.
ತಂದೆ ಪ್ರೀತಿಗೆ ತಂದೆ ಜೊತೆ ಎಲ್ಲೆಡೆ ಕಾಣುತ್ತಿದ್ದ ಅಮರಶಿವ ನನಗಿಂತ ಎತ್ತರ ಬೆಳೆದಿದ್ದಾನೆ ಎಂದರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ.
ಉಳಿದ ಇಬ್ಬರು ಮಕ್ಕಳು ಉನ್ನತ ವ್ಯಾಸಂಗ ನಡೆಸಿದ್ದಾರೆ, ಜನರಿಗಾಗಿ ದುಡಿದ ಈ ಕುಟುಂಬಕ್ಕೆ ನಿಮ್ಮ ಆರ್ಶಿವಾದ ಸದಾ ಸದಾ ಹೀಗೆ ಇರಲಿ ಎಂದರು.
ಶಿವಳ್ಳಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ನಿರೀಕ್ಷೆಗೂ ಮೀರಿ ಆಗಮಿಸಿದ ಜನ ಸಮೂಹ ಹರಿಸಿ ಹಾರೈಸಿತು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
22/03/2022 07:36 pm