ಹುಬ್ಬಳ್ಳಿ: ರಾಜ್ಯದ ಹೆಸರಾಂತ ಆಸ್ಪತ್ರೆ ಕಿಮ್ಸ್ ನಲ್ಲಿ ಬಹುದೊಡ್ಡ ಸಮಸ್ಯೆಯೊಂದು ತಲೆದೂರಿದೆ, ಅದುವೇ ಆರೋಗ್ಯ ಸಿಬ್ಬಂದಿಗಳ ಪದೋನ್ನತಿ ವಿಚಾರ.ಒಬ್ಬರು ಮತ್ತೊಬ್ಬರ ಮೇಲೆ ಅಡ್ಡಗಾಲು ಹಾಕಿ ತಮ್ಮ ತಮ್ಮವರಲ್ಲಿಯೇ ವಿರೋಧವನ್ನು ಹುಟ್ಟು ಹಾಕಿಕೊಂಡು ಪದೋನ್ನತಿ ವಿಚಾರದಲ್ಲಿ ಗೊಂದಲದ ಗೂಡಾಗಿದೆ ಕಿಮ್ಸ್ ಆಸ್ಪತ್ರೆ.
ಹೌದು..ಯಾವುದೇ ಕ್ಷೇತ್ರದಲ್ಲಿ ಕೇವಲ ಐದಾರು ವರ್ಷ ಕೆಲಸ ಮಾಡಿದರೇ ಸಾಕು ಪದೋನ್ನತಿ ಸಿಗುತ್ತದೆ. ಆದರೆ ವಾಣಿಜ್ಯನಗರಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಗ್ಯ ಮತ್ತು ಕುಟುಂಬ ಇಲಾಖೆಯ ಸಿಬ್ಬಂದಿ ಸುಮಾರು ಮೂವತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರೂ ಕೂಡ ಯಾವುದೇ ರೀತಿಯ ಪದನ್ನೊತ್ತಿ ಸಿಗುತ್ತಿಲ್ಲ. ಹಾಗು ಸಿಗಬೇಕಾಗಿದ್ದ ಪದೋನ್ನತಿಗೆ ಕಿಮ್ಸ್ ಸ್ವಾಯತ್ತ ಸಂಸ್ಥೆಯು ಅಡ್ದಗಾಲು ಹಾಕುತ್ತಿದ್ದು, ಇದರಿಂದ ಕಿಮ್ಸ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 26 ಜನ ಸಿಬ್ಬಂದಿಗೆ ಎಷ್ಟು ವರ್ಷಗಳಾದರೂ ಪದೋನ್ನತಿ ದೊರೆತಿಲ್ಲ.
ಒಟ್ಟಿನಲ್ಲಿ ಸಾಕಷ್ಟು ಸಮಸ್ಯೆಗಳನ್ನು ಹೊತ್ತುಕೊಂಡು ರೋಗಿಗಳ ಸೇವೆಗೆ ಮುಂದಾಗಿರುವ ಸಿಬ್ಬಂದಿಗಳ ಬಗ್ಗೆ ಸರ್ಕಾರ ಗಮನ ಹರಿಸಬೇಕಿದೆ. ಅಲ್ಲದೇ ಸರ್ಕಾರದ ನೌಕರರಾಗಿ ಸೇವೆ ಸಲ್ಲಿಸುತ್ತಿರುವ ಆರೋಗ್ಯ ಮತ್ತು ಕುಟುಂಬ ಇಲಾಖೆಯ ಸಿಬ್ಬಂದಿಗೆ ಪದೋನ್ನತಿ ಗೆ ಸರ್ಕಾರ ಅವಕಾಶ ಮಾಡಿಕೊಡಬೇಕಿದೆ.
Kshetra Samachara
18/10/2021 03:38 pm