ಕುಂದಗೋಳ : ತಾಲೂಕಿನ ಬು.ತರ್ಲಘಟ್ಟ ಗ್ರಾಮ ಪಂಚಾಯಿತಿ ಅವ್ಯಹಾರದ ವಿರುದ್ಧ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಸಿದ್ದಣ್ಣ ಕಳಸಣ್ಣನವರ ಹೋರಾಟ ಸತತ ಹದಿಮೂರು ದಿನ ಪೂರೈಸಿದರು ನ್ಯಾಯ ಸಿಗದಂತಾಗಿದೆ.
ಬು.ತರ್ಲಘಟ್ಟ ಗ್ರಾಮ ಪಂಚಾಯಿತಿಯ ಮೂರುವರೆ ಕೋಟಿಗೂ ಅಧಿಕ ಅಕ್ರಮ ಜಾಲದ ಸಾಕ್ಷ್ಯಿ ಹಿಡಿದು ಕುಳಿತ ವೃದ್ಧನ ಹೋರಾಟಕ್ಕೆ ಸತತ ಹನ್ನೇರೆಡು ದಿನಗಳ ಕಾಲ ಇಡೀ ತ್ರಿಪುರ ಗ್ರಾಮಗಳು, ರೈತ ಸಂಘಟನೆ ಹಾಗೂ ಕರವೇ ಕರ್ನಾಟಕ ರಕ್ಷಣಾ ವೇದಿಕೆ, ಕಿಸಾನ್ ಕಾಂಗ್ರೆಸ್ ಸಮಿತಿ, ಅಷ್ಟೇ ಯಾಕೆ ? ಸ್ವತಃ ಶಾಸಕಿ ಕುಸುಮಾವತಿ ಶಿವಳ್ಳಿ ಪ್ರತಿಭಟನೆಗೆ ಸಾಥ್ ನೀಡಿ ತನಿಖೆಗೆ ಆದೇಶ ನೀಡಿದ್ದರೂ ನ್ಯಾಯ ವಿಳಂಬವಾಗುತ್ತಿದೆ.
ಈಗಾಗಲೇ ಬೃಹತ್ ಪಾದಯಾತ್ರೆ ಮೂಲಕ ತಹಶೀಲ್ದಾರ್ ಮತ್ತೊಮ್ಮೆ ಮನವಿ ನೀಡಿ ಗ್ರಾಮಸ್ಥರು ಎಚ್ಚರಿಸಿದ್ದರು, ಹೋರಾಟಕ್ಕೆ ಬೆಲೆ ಸಿಗದೆ ಇರುವುದು ಗ್ರಾಮಸ್ಥರನ್ನು ಮತ್ತಷ್ಟು ಚಿಂತೆಗೆ ಇಡು ಮಾಡಿದೆ. ಸದ್ಯ ಶಾಂತ ಸ್ವರೂಪದಲ್ಲಿ ಇಂದಿಗೂ ಸತ್ಯಾಗ್ರಹ ನಡೆದೆ ಇದೆ.
Kshetra Samachara
28/01/2021 12:58 pm