ಹುಬ್ಬಳ್ಳಿ: ಅದು ಉತ್ತರ ಕರ್ನಾಟಕದ ಹೆಬ್ಬಾಗಿಲು ಮಾತ್ರವಲ್ಲದೇ ಸಿಎಂ ತವರು ಜಿಲ್ಲೆ. ಈ ಜಿಲ್ಲೆಯಲ್ಲಿ ಬಡವರ ಪಾಲಿನ ಸಂಜೀವಿನಿಯಾಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಯೊಂದು ಕರ್ತವ್ಯ ನಿರ್ವಹಿಸುತ್ತಿದೆ. ಆದರೆ ಸಂಸ್ಥೆಗೆ ಈಗ ಅನ್ಯಾಯವಾಗಿದೆ.
ರಾಜ್ಯ ಸರ್ಕಾರದಿಂದ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದ್ದು,ಒಂದು ಕಣ್ಣಿಗೆ ಸುಣ್ಣ, ಇನ್ನೂಂದು ಕಣ್ಣಿಗೆ ಬೆಣ್ಣೆಯಾಗಿದೆ. ಅಷ್ಟಕ್ಕೂ ಅಲ್ಲಿ ಆಗಿದ್ದಾದರೂ ಏನು ಅಂತೀರಾ ಇಲ್ಲಿದೆ ನೋಡಿ ಕಂಪ್ಲಿಟ್ ಡಿಟೈಲ್ಸ್..
ಉತ್ತರ ಕರ್ನಾಟಕದ ಸಂಜೀವಿನಿ ಎಂದೇ ಖ್ಯಾತಿ ಪಡೆದ ಕಿಮ್ಸ್ ಆಸ್ಪತ್ರೆಗೆ ಮಲತಾಯಿ ಧೋರಣೆಯಾಗಿದ್ದು, ಸಿಎಂ ತವರು ಜಿಲ್ಲೆಗೆ ಅನುದಾನದ ತಾರತಮ್ಯವಾಗಿದೆ.
ಕಿಮ್ಸ್ ಗೆ ಅನುದಾನದ ಬಗ್ಗೆ ಸರ್ಕಾರದ ಜಿಪುಣತನ ತೋರುತ್ತಿದ್ದು, ಬೆಂಗಳೂರು, ಮೈಸೂರು ಮೆಡಿಕಲ್ ಕಾಲೇಜ್ ಗಳಿಗೆ ಸಿಂಹಪಾಲು ನೀಡಿರುವ ರಾಜ್ಯ ಸರ್ಕಾರ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಅನ್ಯಾಯ ಮಾಡಿದೆ.
ಬೇರೆ ಜಿಲ್ಲೆಗಳ ಮೆಡಿಕಲ್ ಕಾಲೇಜುಗಳಿಗೆ ಸಿಗುವ ಅನುದಾನಕ್ಕೂ ಹುಬ್ಬಳ್ಳಿಯ ಕಿಮ್ಸಗೆ ಸಿಗುವ ಅನುದಾನಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಅಲ್ಲದೇ ಅನುದಾನದ ಕೊರತೆಯಿಂದ ಉಪಕರಣಗಳ ಸಮಸ್ಯೆ ಹಾಗೂ ಸಿಬ್ಬಂದಿಯ ಕೊರತೆ ಎದ್ದು ಕಾಣುತ್ತಿದೆ. ಆದರೆ ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಮಾತ್ರ ಆ ಮಾತನ್ನು ತಳ್ಳಿ ಹಾಕುತ್ತಿದ್ದಾರೆ.
ಇನ್ನೂ ಸಂಸ್ಥೆಯೇ ಆರ್ಥಿಕ ಕ್ರೋಡೀಕರಣ ಮಾಡಿಕೊಳ್ಳಬೇಕು ಎಂಬುವಂತ ಸರ್ಕಾರದ ಸೂಚನೆಗೆ ಕಂಗಾಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಬೆಂಗಳೂರು ಮೆಡಿಕಲ್ ಕಾಲೇಜ್ ಗೆ 360 ಕೋಟಿ ರೂಪಾಯಿ, ಮೈಸೂರು ಮೆಡಿಕಲ್ ಕಾಲೇಜ್ ಗೆ 219 ಕೋಟಿ ರೂಪಾಯಿ ಅನುದಾನವನ್ನು ರಾಜ್ಯ ಸರ್ಕಾರದಿಂದ ನೀಡಲಾಗಿದೆ.
ಕಿಮ್ಸ್ ನ ವೈದ್ಯಕೀಯ ಸಿಬ್ಬಂದಿಗೆ ವೇತನ ಸಹಿತ (149 ಕೋಟಿ ರೂ.) ಒಟ್ಟು 210 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಇದು ರಾಜ್ಯ ಸರ್ಕಾರದ ಅನ್ಯಾಯದ ಹೊಗಳಿಕೆ ಪರಮಾವಧಿಯಾಗಿದೆ.
ಆರ್ಥಿಕ ಸೌಲಭ್ಯ 103 ಅಡಿಯಲ್ಲಿ ಕಿಮ್ಸ್ ಗೆ ಇನ್ನೂ 20 ರಿಂದ 25 ಕೋಟಿ ರೂ. ಅನುದಾನ ನೀಡಿದರೆ, ಎಲ್ಲ ರೀತಿಯ ಅಭಿವೃದ್ಧಿಗೆ ಸಹಕಾರ ಸಿಗಲಿದೆ.
Kshetra Samachara
09/06/2022 01:33 pm