ಧಾರವಾಡ: ಧಾರವಾಡ ತಾಲೂಕಿನ ಕವಲಗೇರಿಯಲ್ಲಿ ಇಬ್ಬರು ಮಹಿಳೆಯರ ಮೇಲೆ ಇಂದು ನಸುಕಿನಜಾವ ಚಿರತೆ ದಾಳಿ ಮಾಡಿದ್ದು, ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಶಾಸಕ ಅಮೃತ ದೇಸಾಯಿ ಅವರು, ಚಿರತೆ ದಾಳಿಯಿಂದ ಗಾಯಗೊಂಡ ಮಂಜುಳಾ ತೋಟಗೇರಿ ಹಾಗೂ ಬಸವಣ್ಣೆವ್ವ ಅವರ ಆರೋಗ್ಯ ವಿಚಾರಿಸಿದರು.
ಇಬ್ಬರೂ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಅರಣ್ಯ ಇಲಾಖೆ ಆದಷ್ಟು ಬೇಗ ಚಿರತೆ ಸೆರೆ ಹಿಡಿಯಬೇಕು ಎಂದು ಶಾಸಕರು ಸೂಚನೆ ನೀಡಿದರು.
Kshetra Samachara
31/01/2022 06:24 pm