ಅಳ್ನಾವರ: ಕಲಘಟಗಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸಂತೋಷ ಲಾಡ್ ಅವರು ಕ್ಷೇತ್ರದ ಜನತೆಗೆ ಉಚಿತ ವೈದ್ಯಕೀಯ ಸೇವೆ ಒದಗಿಸಲು ಎಂಬಿಬಿಎಸ್ ವೈದ್ಯರನ್ನು ಒಳಗೊಂಡ ಮೂರು ಆ್ಯಂಬುಲೆನ್ಸ್ ಗಳನ್ನು ಒದಗಿಸಿದ್ದಾರೆ.
ಅಳ್ನಾವರ ತಾಲೂಕಿನಾದ್ಯಂತ ಅಂಬೋಳ್ಳಿ, ಡೋರಿ, ಬೆನಚಿ ಹೀಗೆ ಪ್ರತಿ ಗ್ರಾಮಕ್ಕೂ ತೆರಳಿದ ಸಂತೋಷ್ ಲಾಡ್ ಜನರಿಗೆ ಆ್ಯಂಬುಲೆನ್ಸ್ ಸೇವೆ ಬಗ್ಗೆ ಮಾಹಿತಿ ನೀಡಿದರು. ಗ್ರಾಮಸ್ಥರೆಲ್ಲರು ಪಕ್ಷಬೇಧ ಮರೆತು ದೇವಸ್ಥಾನದ ಮುಂದೆ ಆ್ಯಂಬುಲೆನ್ಸ್‌ಗೆ ಪೂಜೆ ಸಲ್ಲಿಸಿ ಕೈಮುಗಿದು ನಮಸ್ಕರಿಸಿದರು. ಸಂತೋಷ ಲಾಡ್ ಅವರ ಈ ನಿಸ್ವಾರ್ಥ ಸೇವೆಗೆ ತಾಲೂಕಿನ ಎಲ್ಲ ಜನತೆ ಸಂತಸ ವ್ಯಕ್ತಪಡಿಸಿದ್ದಾರೆ.
ಕಲಘಟಗಿ ವಿಧಾನಸಭಾ ಮತ ಕ್ಷೇತ್ರ ಹಿಂದುಳಿದ ವರ್ಗ ದ ಪಟ್ಟಿ ಸೇರಿದ್ದು,ಸಂತೋಷ ಲಾಡ್ ರವರು ನಿಷ್ಪಕ್ಷಪಾತ ವಾಗಿ ಜನರ ಆರೋಗ್ಯ ದ ಹಿತ ದೃಷ್ಟಿಯಿಂದ ಉಚಿತ ವೈದ್ಯಕೀಯ ಸೇವೆ ಒದಗಿಸುತ್ತಿರುವುದು ನಮಗೆಲ್ಲ ಖುಷಿ ತಂದಿದೆ ಎಂದು ಅರವರಟಗಿ ಗ್ರಾಮ ಪಂಚಾಯಿತಿ ಸದಸ್ಯರಾದ ವಿಶ್ವಂಬರ ಬಣಸಿ ಅವರು ಪಬ್ಲಿಕ್ ನೆಕ್ಸ್ಟ್ ಗೆ ತಿಳಿಸಿದ್ದಾರೆ.
Kshetra Samachara
06/10/2021 10:07 am