ಹುಬ್ಬಳ್ಳಿ: ಪಕ್ಷದ ಕೆಲವು ಆಂತರಿಕ ಸಮಸ್ಯೆಗಳಿಂದ ನನಗೆ ಸಭಾಪತಿ ಸ್ಥಾನ ನೀಡುತ್ತಿಲ್ಲ. ಬಿಜೆಪಿಯ ಕೆಲವು ಪರಿಷತ್ ಸದಸ್ಯರು ನನ್ನನ್ನ ಸಭಾಪತಿ ಮಾಡಲು ವಿರೋಧ ವ್ಯಕ್ತಪಡಿಸಿದ್ದಾರೆ. ಪಕ್ಷಕ್ಕೆ ಈಗ ಬಂದವರಿಗೆ ಏಕೆ ಸಭಾಪತಿ ಸ್ಥಾನ ಎನ್ನುತ್ತಿದ್ದಾರೆ. ಈಗ ಅವರೆಲ್ಲನ್ನೂ ಸಮಾಧಾನ ಮಾಡಲಾಗಿದೆ. ನನ್ನನ್ನು ಸಭಾಪತಿ ಮಾಡುತ್ತಾರೆಂದು ವಿಶ್ವಾಸ ಇದೆ ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, ನನ್ನನ್ನು ಸಭಾಪತಿ ಮಾಡುವ ಭರವಸೆ ಇದೆ. ಈಗ ಅದಕ್ಕೆನೂ ಅವಸರವಿಲ್ಲ. ಮೊನ್ನೆ ನಡೆದ ಕೋರ್ ಕಮಿಟಿಯಲ್ಲಿ ಒಪ್ಪಂದ ಮಾಡಲಾಗಿದೆ. ಈಗ ಒಂದು ತೀರ್ಮಾನಕ್ಕೆ ಬಿಜೆಪಿ ಹೈಕಮಾಂಡ್ ಬಂದಿದೆ. ಅಧಿವೇಶನ ಪ್ರಾರಂಭವಾದ ನಂತರ ನನ್ನನ್ನು ಸಭಾಪತಿ ಮಾಡುತ್ತಾರೆ ಎಂದರು.
ಬಿಜೆಪಿ ಹೊರಟ್ಟಿಯವರನ್ನು ಸೈಡ್ ಲೈನ್ ಮಾಡಿದ್ದಾರೆ ಎಂಬುವಂತ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಅವರು, ಬಿಜೆಪಿಯವರು ಸೈಡ್‌ಲೈನ್ ಮಾಡಿದ್ದಾರೋ, ಯಾವ ಲೈನ್ ಮಾಡಿದ್ದಾರೆ ನನಗೆ ಗೊತ್ತಿಲ್ಲ. ಅಧಿಕಾರ ಇದ್ದುಕೊಂಡೆ ಕೆಲಸ ಮಾಡಬೇಕೆಂತಿನಿಲ್ಲ. ಬಿಜೆಪಿ ಹೈಕಮಾಂಡ, ಸಿಎಂ ಯಾವಾಗ ತೀರ್ಮಾನ ತೆಗೆದುಕೊಳ್ಳುತ್ತಾರೇ ಕಾಯ್ದು ನೋಡಬೇಕಿದೆ. ಅವರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ದನಾಗಿದ್ದೆನೆ ಎಂದು ಅವರು ಹೇಳಿದರು.
31 ಜನ ಪರಿಷತ್ ಸದಸ್ಯರಲ್ಲಿ 27 ಜನ ನನ್ನ ಪರವಾಗಿದ್ದಾರೆ. ಕೇವಲ ನಾಲ್ಕು ಜನರು ನನಗೆ ವಿರೋಧ ಮಾಡುತ್ತಿದ್ದಾರೆ. ರಾಜಕಾರಣದಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು ಇರುತ್ತವೆ. ಬಿಜೆಪಿಯವರು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ, ನನ್ನ ಸಭಾಪತಿ ಮಾಡುತ್ತಾರೆಂಬ ಭರವಸೆ, ನಂಬಿಕೆ ನನಗೆ ಇದೆ. ಯಡಿಯೂರಪ್ಪನವರು ನೇರವಾಗಿ ಹೇಳಿದ್ದಾರೆ, ನಮ್ಮ ನಾಲಿಗೆ ಒಂದೇ ಇರಬೇಕು ಅವರನ್ನು ಸಭಾಪತಿ ಮಾಡಬೇಕೆಂದು ಹೇಳಿದ್ದಾರೆ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
13/10/2022 04:40 pm