ಧಾರವಾಡ: ಕಲಘಟಗಿ ಪಟ್ಟಣ ಪಂಚಾಯತಿ 14 ನೇ ವಾರ್ಡಿನ ಸದಸ್ಯ ಸ್ಥಾನವು ಲಕ್ಷ್ಮೀ ಮುರಳೀಧರ ಪಾಲಕರ ಇವರ ಮರಣದಿಂದಾಗಿ ಖಾಲಿಯಾಗಿದ್ದು, ಆ ಸ್ಥಾನವನ್ನು ತುಂಬಲು ಅಕ್ಟೋಬರ್ 28 ರಂದು ಚುನಾವಣೆ ನಡೆಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.
ಈ ಕುರಿತು ಇಂದು ಅಧಿಸೂಚನೆ ಹೊರಡಿಸಿರುವ ಅವರು, ಕಲಘಟಗಿ ಪಟ್ಟಣ ಪಂಚಾಯತಿ ವಾರ್ಡ್ ನಂ.14 ರ ಸ್ಥಾನವು ಸಾಮಾನ್ಯ (ಮಹಿಳೆ) ಮೀಸಲಾತಿಯಾಗಿದೆ. ಈ ಚುನಾವಣೆಗೆ ಅಕ್ಟೋಬರ್ 17 ರೊಳಗಾಗಿ ನಾಮಪತ್ರಗಳನ್ನು ಸಲ್ಲಿಸಬಹುದು. ಅಕ್ಟೋಬರ್ 18 ರಂದು ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಯುವುದು. ಅಕ್ಟೋಬರ್ 20 ರಂದು ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಬಹುದು. ಮತದಾನ ಅವಶ್ಯವಿದ್ದರೆ ಅಕ್ಟೋಬರ್ 28 ರಂದು ಬೆಳಿಗ್ಗೆ 7 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ಮತದಾನ ನಡೆಯುವುದು. ಚುನಾವಣೆಯನ್ನು ಅಕ್ಟೋಬರ್ 31 ರೊಳಗಾಗಿ ಮುಕ್ತಾಯಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
Kshetra Samachara
10/10/2022 07:20 pm